Friday, October 21, 2022

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಕಲಬುರಗಿ ಇವರ ಸಹಯೋಗದಲ್ಲಿ ದಿನಾಂಕ ೧೮-೧೦-೨೨ ರಿಂದ ೨೦-೧೦-೨೨ ರ ವರೆಗೆ ನಲಿಕಲಿ ಸುಗಮಕಾರರಿಗೆ ನಡೆದ ಕನ್ನಡ ಮತ್ತು ಗಣಿತ ವಿಷಯಗಳ ೩ ದಿನಗಳ ಸನಿವಾಸ ಕಾರ್ಯಗಾರ.


































































 ೩ ದಿನಗಳ ಕಾರ್ಯಾಗಾರದಲ್ಲಿ ಮೊದಲನೆ ಒಂದುವರೆ ದಿನ ಭಾಷೆ ವಿಷಯದ ಕುರಿತು  ಬುನಾದಿ ಸಾಕ್ಷರತೆಯ ಮಹತ್ವ, ಭಾಷಾ ಬೋಧನೆಯ ಉದ್ದೇಶಗಳು, ಭಾಷಾ ತರಗತಿಗಳಲ್ಲಿ ಬೊಧನಾ ಅಭ್ಯಾಸಗಳ ಮಹತ್ವ,ನಲಿಕಲಿ ಭಾಷಾ ವಿಷಯದಲ್ಲಿ ಕೈಬಿಡಲಾದ/ಸಮ್ಮಿಳಿತ ಗೊಳಿಸಲಾದ ಚಟುವಟಿಕೆಗಳು ಕುರಿತು ಸುಗಮಕಾರರಿಗೆ ಗುಂಪುಗಳನ್ನು ಮಾಡುವ ಮೂಲಕ ಚರ್ಚೇಮಾಡಿ ಗುಂಪುವಾರು ವಿಷಯ ಮಂಡನೆ ಮಾಡಲು ಅವಕಾಶ ನೀಡಲಾಯಿತು.ಮತ್ತು ಭಾಷಾ ವಿಷಯಕ್ಕೆ ಅವಶ್ಯಕ ಇರುವ ಕಲಿಕೋಪಕರಣಗಳ ತಯಾರಿಕೆಗೆ ಸಾಮಾಗ್ರಿಗಳನ್ನು ನೀಡುವ ಮೂಲಕ ಗುಂಪುಗಳನ್ನು ಮಾಡಿ ಕಲಿಕೋಪಕರಣಗಳನ್ನು ತಯಾರಿಸಿಕೊಳ್ಳಲು ಅವಕಾಶ ನೀಡಿದರು.


ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಅಂಕಿ ಸಂಖ್ಯೆಗಳು, ಸ್ಥಾನ ಬೆಲೆ ಸಂಕಲನ,ವ್ಯವಕಲನ, ವಿನ್ಯಾಸಗಳು,ಹೆಚ್ಚು, ಕಡಿಮೆ,ಸಮ,ಏರಿಕೆ, ಇಳಿಕೆ,ಈ ಪರಿಕಲ್ಪನೆಗಳನ್ನು ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಬಳಸಿಕೊಂಡು ಪರಿಕಲ್ಪನೆ ಮೂಡಿಸುವ ಕುರಿತು ಗುಂಪುಗಳನ್ನು ರಚನೆ ಮಾಡಿ ಗುಂಪುವಾರು ವಿಷಯ ಮಂಡನೆಗೆ ಅವಕಾಶ ನೀಡಿದರು.

ಸೇಡಂ, ಚಿಂಚೋಳಿ, ಹುಮನಾಬಾದ ಈ ಮೂರು ತಾಲುಕುಗಳ ನಲಿಕಲಿ ಸುಗಮಕಾರರು ನಮ್ಮ ತಂಡದಲ್ಲಿ ಇದ್ದರು. 

ಒಟ್ಟಾರೆಯಾಗಿ ೩ದಿನಗಳ ಕಾರ್ಯಗಾರ ಉತ್ತಮವಾಗಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಪೂರಕವಾಗಿತ್ತು ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಉತ್ತಮವಾಗಿ ವಿಷಯ ಮಂಡನೆ ಮಾಡಿದರು ಸನಿವಾಹ ಕಾರ್ಯಗಾರ ಆಗಿರುವುದರಿಂದ ಉತ್ತಮವಾದ ವಸತಿ ಸೌಲಭ್ಯದ ಜೊತೆಗೆ ಉತ್ತಮವಾಗಿ ಉಪಹಾರ, ಚಹಾ,ಊಟದ ವ್ಯವಸ್ಥೆ ಮಾಡಿದರು ಈ ಕಾರ್ಯಾಗಾರದಲ್ಲಿ ನನಗೆ ಭಾಗವಹಿಸಲು ಅವಕಾಶ ನೀಡಿರುವ ಇಲಾಖೆಯ ಅಧಿಕಾರಿಗಳಿಗೆ ಮತ್ತು ಅಜೀಂ ಪ್ರೇಮಜಿ ಫೌಂಡೇಶನ್ ಸಂಯೋಜಕರಿಗೆ ವಂದನೆಗಳು.

💐💐🙏🙏🙏