Saturday, October 21, 2023

ಸ, ಹಿ, ಪ್ರಾ, ಶಾಲೆ, ನರನಾಳ. ತಾ:, ಚಿಂಚೋಳಿ.
























ನಿನ್ನೆ ಮತ್ತು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರನಾಳ ತಾ: ಚಿಂಚೋಳಿ ಶಾಲೆಯಲ್ಲಿ ಸುಣ್ಣ ಬಣ್ಣ ಮಾಡಿರುವುದರಿಂದ ನಲಿ ಕಲಿ ತರಗತಿಯಲ್ಲಿ ಈ ವರ್ಷದ ಕಲಿಕಾ ಏಣಿಗೆ ಅನುಗುಣವಾಗಿ ತರಗತಿವಾರು ವಿಷಯವಾರು ಕಾರ್ಡುಗಳನ್ನು ಜೋಡಿಸಲಾಯಿತು ಶಾಲೆಯ ಮುಖ್ಯ ಗುರುಗಳಾದ ಶ್ರೀ ರಾಮಶೆಟ್ಟಿ ಚೌಹಾಣ್ ಸಹ ಶಿಕ್ಷಕರಾದ ಸುನಿಲ್ ಕುಮಾರ್ ಅತಿಥಿ ಶಿಕ್ಷಕಿ ಶ್ರೀಮತಿ ಪಾರ್ವತಿ. ಶಾಲೆಯ ಹಿರಿಯ ವಿದ್ಯಾರ್ಥಿ ಸಂದೀಪ್  ಪ್ರಸ್ತುತ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳು ಉಪಸ್ಥಿತರಿದ್ದರು. ಕಲಿಕಾ ಚಪ್ಪರ, ಪ್ರಗತಿ ನೋಟ, ಶಿಕ್ಷಕರ ದಿನಚರಿ, ಶಿಕ್ಷಕರ ವೈಯಕ್ತಿಕ ವಹಿ, ಕ್ರೂಡಿಕೃತ ವಹಿ,ಮುಂತಾದವುಗಳ ಕುರಿತು ಮಾಹಿತಿ ನೀಡಲಾಯಿತು.

Thursday, October 19, 2023

ದಿನಾಂಕ 20/09/2023 ರಂದು ಸ, ಹಿ, ಪ್ರಾ, ಶಾಲೆ, ಕದಲಾಪೂರಗೆ.ಸೇಡಂ ತಹಸೀಲ್ದಾರರ ಭೇಟಿ.








ದಿನಾಂಕ 20/09/2023 ರಂದು ನಮ್ಮ ಶಾಲೆಗೆ ಸೇಡಂ ತಹಸಿಲ್ದಾರರಾದ

ಕು/ಶ್ರೀಯಾಂಕ ಧನಶ್ರೀ ಮೇಡಂ ರವರು ಭೇಟಿನೀಡಿ ಮತಗಟ್ಟೆ ಕೋಣೆ, ಅಡುಗೆ ಕೋಣೆ, ನಲಿಕಲಿ ತರಗತಿ ಕೋಣೆ ವೀಕ್ಷಿಸಿದರು ನಲಿಕಲಿ ಮಕ್ಕಳ ಅಭ್ಯಾಸ ಪುಸ್ತಕಗಳನ್ನು ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Wednesday, October 18, 2023

ಮೂರು ದಿನಗಳ ಆಂತರಿಕ ಸಾಮರ್ಥ್ಯ ಅಭಿವೃದ್ಧಿ ಕಾರ್ಯಗಾರ ಮೈರಾಡ ಸಂಸ್ಥೆ ಡಣಾಪುರ ತಾಲೂಕು ಹೊಸಪೇಟ ವಿಜಯನಗರ ಜಿಲ್ಲೆ








































































 ಟಾಟಾ ಕಲಿಕಾ ಟ್ರಸ್ಟ್ ಯಾದಗಿರಿ ಕೊಪ್ಪಳ, ಮತ್ತು ಕುಷ್ಟಗಿ ತಾಲೂಕುಗಳ ಸಂಯೋಜಕರಿಗೆ  ವಿಜಯ ನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪೂರದ ಮೈರಾಡ ಸಂಸ್ಥೆಯಲ್ಲಿ ದಿನಾಂಕ 16,17,18  ಅಕ್ಟೋಬರ್ 2023 ರಂದು ಮೂರು ದಿನಗಳ ಆಂತರಿಕ ತಂಡದ ಬಲವರ್ಧನೆ ಸಾಮರ್ಥ್ಯ ಅಭಿವೃದ್ಧಿ ಸನಿವಾಸ  ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದ ಉದ್ದೇಶವನ್ನು ಕುರಿತು ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರಾದ ಶ್ರೀ ಶಿವಕುಮಾರ ಯಾದವ್ ಸರ್ ರವರು ತಿಳಿಸಿದರು ಕಾರ್ಯಗಾರದ ಉಪಯೋಗವನ್ನು ಎಲ್ಲಾ ಸಂಯೋಜಕರು ಪಡೆದುಕೊಳ್ಳಲು ತಿಳಿಸಿದರು.
 ಟಾಟಾ ಕಲಿಕಾ ಟ್ರಸ್ಟ್ ನ ಯಾದಗಿರಿ ಜಿಲ್ಲೆಯ ಮುಖ್ಯಸ್ಥರಾದ ನಿರ್ಮಲ ಮೇಡಂ ರವರು 
ಉಪಸ್ಥಿತರಿದ್ದರು.
ಮೊದಲನೆ ಅವಧಿಯಲ್ಲಿ ಪರಸ್ಪರ ಪರಿಚಯ ಮಾಡಿಕೊಳ್ಳುತ್ತ 5 ಗುಂಪುಗಳನ್ನು ಮಾಡಿ  ಜವಾಬ್ದಾರಿ ಹಂಚಿಕೆ ಮಾಡಿ ಪೂರ್ವ ಪರೀಕ್ಷೆಯನ್ನು ಮಾಡಲಾಯಿತು.
ಎರಡನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅನಂತಸ್ವಾಮಿ ಯವರು ನಿಪುಣ್ ಭಾರತ್ ಮತ್ತು FLN ಕುರಿತು ವಿಷಯ ಮಂಡನೆ ಮಾಡಿದರು ಮೂರನೆಯ ಅವಧಿಯಲ್ಲಿ ನಲಿ-ಕಲಿ ನಡೆದು ಬಂದ ದಾರಿ ನಲಿ-ಕಲಿಯಲ್ಲಿ ಬಳಕೆಯಾಗಿರುವ ವಿಶೇಷ ಪದಗಳ ಕುರಿತು ಲಿಂಗಪ್ಪ ಸರ್ ರವರು ಹಲವಾರು ಉದಾಹರಣೆಗಳ ಮೂಲಕ ವಿಷಯ ಮಂಡನೆ ಮಾಡಿದರು.
ನಾಲ್ಕನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ ರವರು ನಲಿ-ಕಲಿಯಲ್ಲಿ ಭಾಷೆ ಕಲಿಕೆ ಪರಿಷ್ಕರಣೆ ಮುಂತಾದ ವಿಷಯಗಳ ಕುರಿತು ವಿಷಯ ಮಂಡನೆ ಮಾಡುವುದರ ಜೊತೆಗೆ ಭಾಷೆ ವಿಷಯದ ಗುಂಪು ತಟ್ಟೆಗಳನ್ನು ಹಾಕಿ ಶಿಬಿರಾರ್ಥಿಗಳಿಗೆ ಕಾರ್ಡುಗಳನ್ನು ನೀಡಿ ಲೋಗೋ ಗುರುತಿಸಿ ಗುಂಪು ತಟ್ಟೆಗಳಲ್ಲಿ ಕುಳಿತುಕೊಳ್ಳುವ ಚಟುವಟಿಕೆ ಮಾಡಿಸಿದರು.
ಮೊದಲನೇ ದಿನದ ಕಾರ್ಯಗಾರದ ಎಲ್ಲಾ ಅವಧಿಗಳಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆ ತುಂಬಾ ಉತ್ತಮವಾಗಿತ್ತು.
ಎರಡನೆಯ ದಿನದ ಕಾರ್ಯಾಗಾರಕ್ಕೆ  ಯಾದಗಿರಿ ಜಿಲ್ಲೆಯ ಯೋಜನೆ ನಿರ್ದೇಶಕರಾದ ಶ್ರೀ ಗಿರೀಶ್ ಸರ್ ರವರು ಭಾಗವಹಿಸಿ
ನಲಿಕಲಿ ಬಲವರ್ಧನೆಗಾಗಿ ಟಾಟಾ ಕಲಿಕಾ ಟ್ರಸ್ಟ್ ಹಾಕಿಕೊಂಡಿರುವ ಯೋಜನೆಗಳ ಕುರಿತು ಹಾಗೂ ಈ ಕಾರ್ಯದ ಗುರಿ ಮತ್ತು ಉದ್ದೇಶಗಳನ್ನು ಕುರಿತು ಮಾತನಾಡಿದರು.
ಎರಡನೇ ದಿನದ ಮೊದಲನೇ ಅವಧಿಯಲ್ಲಿ ನಲಿಕಲಿಯಲ್ಲಿ ಗಣಿತ ಕಲಿಕೆಯ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ ರವರು ಗಣಿತ ವಿಷಯದ ಕ್ಷೇತ್ರಗಳು, ಮೂರು ತರಗತಿಗಳ ಪರಿಕಲ್ಪನೆಗಳು,
ಗಣಿತ ಪುಸ್ತಕಗಳು ಒಳಗೊಂಡಿರುವ ಅಂಶಗಳು, ಪರಿಷ್ಕರಣೆ,ಕಾರ್ಡುಗಳ ಜೋಡಣೆ, ಕುರಿತು ಸುಗಮಕಾರರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಹಾಗೆ ವಿಷಯ ಮಂಡನೆ ಮಾಡಿದರು.
ಎರಡನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅನಂತಸ್ವಾಮಿ ಯವರು ನಲಿಕಲಿಯಲ್ಲಿ ENK LEVEL 1.ರ ಕುರಿತು ಗುಂಪು ತಟ್ಟೆಗಳು,ಕಲಿಕಾ ಏಣಿ,ಪ್ರಗತಿ ನೋಟ ಮುಂತಾದವುಗಳ ಪರಿಚಯ ಮಾಡಿಸಿದರು.
ಮೂರನೆಯ ಅವಧಿಯಲ್ಲಿ 
ಕರಿಗೂಳಿ ದುಗನೂರ ರವರು ನಲಿಕಲಿ ಪರಿಸರ ಅಧ್ಯಯನದ ಕ್ಷೇತ್ರಗಳು, ಪರಿಸರ ಅಧ್ಯಯನದಲ್ಲಿ ಆಗಿರುವ ಪರಿಷ್ಕರಣೆ,ಲೋಗೋಗಳು, ಕಲಿಕಾ ಏಣಿ,ಗುಂಪು ತಟ್ಟೆಗಳು, ಮುಂತಾದ ವಿಷಯಗಳ ಕುರಿತು ಸುಗಮಕಾರರೊಂದಿಗೆ ಚರ್ಚಿಸಿದರು.
ಕೊನೆಯ ಅವಧಿಯಲ್ಲಿ ನಲಿಕಲಿ ಮೌಲ್ಯಮಾಪನ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಸುಗಮಕಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಅನಂತಸ್ವಾಮಿ ಯವರು ವಿಷಯ ಮಂಡನೆ ಮಾಡಿದರು.
ಸಂಜೆ 5 ಗಂಟೆಗೆ ಬಾಬಿ ಮೇಡಂ ವಿನ್ಯಾಸ ತಂಡದ ಮುಖ್ಯಸ್ಥರು ಕಲಿಕೆ ಟಾಟಾ ಟ್ರಸ್ಟ ರವರು online ನಲ್ಲಿ ಎಲ್ಲಾ ಸುಗಮಕಾರರನ್ನು ಉದ್ದೇಶಿಸಿ ಮಾತನಾಡಿದರು ಕಲಿಕೆ ಟಾಟಾ ಟ್ರಸ್ಟ ECC, ನಲಿಕಲಿ, ಗ್ರಂಥಾಲಯ ಅಭಿವೃದ್ಧಿಗಾಗಿ ಮಾಡುತ್ತಿರುವ ಕಾರ್ಯಗಳ ಕುರಿತು ಶಿಬಿರಾರ್ಥಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾ ಚರ್ಚಿಸಿದರು.
ರಾತ್ರಿ 7:50 ರಿಂದ 9 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಹಲವಾರು ಕರೋಕೆ ಹಾಡುಗಳನ್ನು ಹಾಡಿ ರಂಜಿಸಿದರು.
 ಎರಡನೆ ದಿನದ  ಅವಧಿಗಳ ಚಟುವಟಿಕೆ, ಚರ್ಚೆಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು.
ಮೂರನೆಯ ದಿನದ ಮೊದಲನೆಯ ಅವಧಿಯಲ್ಲಿ ನಲಿ-ಕಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಾದರೆ ಮುಖ್ಯವಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಯ ಕುರಿತು ಸಂಪನ್ಮೂಲ ವ್ಯಕ್ತಿ ಕರಿಗೂಳಿ ದುಗನೂರು ರವರು ಶಿಬಿರಾರ್ಥಿಗಳಿಂದ ಮಾಹಿತಿಯನ್ನು ಪಡೆಯುತ್ತಾ ತರಗತಿ ಸಿದ್ಧತೆ, ಮಕ್ಕಳ ಸಿದ್ಧತೆ, ಸುಗಮಕಾರರ ಸಿದ್ಧತೆ ಕುರಿತು ಹಲವಾರು ಉದಾಹರಣೆಗಳ ಮೂಲಕ PPT ಗಳನ್ನು ತೋರಿಸುವ ಮೂಲಕ ವಿಷಯವನ್ನು ಮಂಡನೆ ಮಾಡಿದರು.
ಎರಡನೆಯ ಅವಧಿಯಲ್ಲಿ ಶಿಬಿರಾರ್ಥಿಗಳನ್ನೇ ಬಳಸಿಕೊಂಡು ಸಂಪನ್ಮೂಲ ವ್ಯಕ್ತಿ ಅನಂತಸ್ವಾಮಿಯವರು ಭಾಷೆ ವಿಷಯದ ಪ್ರಾಯೋಗಿಕ ತರಗತಿ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದರು ಶಿಬಿರಾರ್ಥಿಗಳು ತರಗತಿ ನಿರ್ವಹಣೆ ಕುರಿತು ಕೇಳುವ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರ ನೀಡುವ ಮೂಲಕ ತರಗತಿ ನಿರ್ವಹಣೆ ಮಾಡಲಾಯಿತು.
ಮೂರನೆಯ ಅವಧಿಯಲ್ಲಿ ಶ್ರೀ ಶಿವಕುಮಾರ ಡಿ ಕಾರ್ಯನಿರ್ವಾಹಕ ಅಧಿಕಾರಿಗಳು ಕಲಿಕೇ ಟಾಟಾ ಟ್ರಸ್ಟ್ ರವರು online ನಲ್ಲಿ ಶಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರತಿಯೊಬ್ಬರು ನಲಿಕಲಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಸರಿಸಬೇಕಾದ ಕ್ರಮಗಳು ಮುಂದಿನ ದಿನಗಳಲ್ಲಿ ಮಾಡಬೇಕಾಗಿರುವ ಕಾರ್ಯಯೋಜನೆ ಕುರಿತು ಚರ್ಚಿಸಿದರು.
ಕೊನೆಯ ಅವಧಿಯಲ್ಲಿ ಕಲಿಕಾ ಟಾಟಾ ಟ್ರಸ್ಟ್ ನ ಮಾಲತೇಶ್ ಸರ್ ರವರು ಸಂಯೋಜಕರ 3 ಗುಂಪುಗಳನ್ನು ಮಾಡಿ ಪ್ರತಿ ಗುಂಪುಗಳಿಗೆ ಒಂದೊಂದು ವಿಷಯವನ್ನು ನೀಡಿದರು
 ಅವರೆಲ್ಲರೂ ತಮ್ಮ ತಮ್ಮ ಗುಂಪುಗಳಲ್ಲಿ ವಿಷಯದ ಕುರಿತು ಚರ್ಚಿಸಿ ಮಂಡನೆ ಮಾಡಿದರು.
*ಮೊದಲನೆಯ ಗುಂಪು ನಲಿ ಕಲಿಯಲ್ಲಿ ಲಭ್ಯತೆ ಇರುವ ಮುದ್ರಿತ ಸಾಮಗ್ರಿಗಳ ಕುರಿತು ವಿಷಯ ಮಂಡನೆ ಮಾಡಿದರು.*
*ಎರಡನೆಯ ತಂಡದವರು ಗ್ರಂಥಾಲಯದಲ್ಲಿ ಲಭ್ಯವಿರುವ ಮುದ್ರಿತ ಸಾಹಿತ್ಯದ ಬಗ್ಗೆ ವಿಷಯ ಮಂಡನೆ ಮಾಡಿದರು.*
*ಮೂರನೇ ತಂಡದವರು ಕಲಿಕಾ ಚೇತನ ತರಗತಿಯಲ್ಲಿ ಲಭ್ಯವಿರುವ ಮುದ್ರಿತ ಸಾಮಗ್ರಿಗಳ ಕುರಿತು ವಿಷಯ ಮಂಡನೆ ಮಾಡಿದರು.*
*ಒಟ್ಟಾರೆಯಾಗಿ ಮೂರು ದಿನಗಳ ಆಂತರಿಕ ತಂಡದ ಬಲವರ್ಧನೆ ಸಾಮರ್ಥ್ಯ ಅಭಿವೃದ್ಧಿ ಸನಿವಾಸ  ಕಾರ್ಯಗಾರ ಎಲ್ಲರ ಸಹಕಾರ ಪ್ರತಿ ಅವಧಿಗಳ ಚರ್ಚೆ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯಿಂದ ಉತ್ತಮವಾಗಿ ನಡೆಯಿತು.