Saturday, November 26, 2022
Sunday, November 20, 2022
Saturday, November 5, 2022
ನವಂಬರ್ ತಿಂಗಳ ನಲಿಕಲಿ ಸಮಾಲೋಚನೆ ಸಭೆ TLC ಮುಧೋಳ.
ಇಂದು ಮುಧೋಳ TLC ಕೇಂದ್ರದಲ್ಲಿ ಮುಧೋಳ, ರಿಬ್ಬನಪಲ್ಲಿ,ಲಿಂಗಂಪಲ್ಲಿ,
ಮದನಾ ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗೆ ಸಮಾಲೋಚನೆ ಸಭೆ ಹಮ್ಮಿಕೊಳ್ಳಲಾಯಿತು.
*ಮೊದಲನೆ ಅವಧಿಯಲ್ಲಿ* ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಲಿಕಾ ಪ್ರಕ್ರಿಯೆ ಮಕ್ಕಳ ಭಾಗವಹಿಸುವಿಕೆ ಕುರಿತು ಅನುಭವ ಹಂಚಿಕೊಳ್ಳಲಾಯಿತು.
*ಎರಡನೆ ಅವಧಿಯಲ್ಲಿ*
ನಲಿಕಲಿ ಭಾಷೆ ನವೆಂಬರ್ ತಿಂಗಳಲ್ಲಿ ಬರುವ ಮೈಲುಗಲ್ಲುಗಳು ಮತ್ತು ಚಟುವಟಿಕೆಗಳು ಕಲಿಕಾ ಚೇತರಿಕೆ ಅಭ್ಯಾಸ ಪುಸ್ತಕದ ಬಳಕೆ ಮಾರ್ಪಡಿಸಿದ ಪ್ರಗತಿನೋಟಗಳ ಪರಿಚಯ ಮಾಡಿಸಲಾಯಿತು.
*ಮೂರನೆ ಅವಧಿಯಲ್ಲಿ*
ನವೆಂಬರ್ ತಿಂಗಳ ಗಣಿತ ಚಟುವಟಿಕೆಗಳು ಕಲಿಕಾ ಹಾಳೆಗಳ ಬಳಕೆ ಪ್ರಗತಿನೋಟಗಳ ಪರಿಚಯ ಕಲಿಕಾ ಸಾಮಾಗ್ರಿಗಳನ್ನು ಬಳಸಿಕೊಂಡು ಸ್ಥಾನ ಬೆಲೆ ,ದಶಕ ಸಹಿತ,ದಶಕ ರಹಿತ,ಸಂಕಲನ ,ವ್ಯವಕಲನ,ಮಿಶ್ರಕ್ರಿಯೆ,
ಸಮಯದ ಕಲ್ಪನೆ,ಚಟುವಟಿಕೆಗಳನ್ನು ಸುಗಮಕಾರರಿಗೆ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾಡಿಸಲಾಯಿತು.
*ನಾಲ್ಕನೆ ಅವಧಿಯಲ್ಲಿ*
Enk ಮತ್ತು ಪರಿಸರ ಅಧ್ಯಯನದ ಚಟುವಟಿಕೆಗಳ ಪರಿಚಯ ಮಾಡಿಕೊಡಲಾಯಿತು.
ಹಾಗೂ ನಲಿಕಲಿಯಲ್ಲಿ
ಮೌಲ್ಯಮಾಪನ ರೂಪಣಾತ್ಮಕ 1,2 ಮತ್ತು *ನಲಿಕಲಿಯಲ್ಲಿ ನಿರ್ವಹಿಸಬೇಕಾದ ದಾಖಲೆಗಳ* ಕುರಿತು ಚರ್ಚೀಸಲಾಯಿತು.
*ಸಮಾಲೋಚನೆ ಸಭೆಗೆ ಕ್ಷೇತ್ರ ಸಮನ್ವಯಾಧೀಕಾರಿಗಳಾ ಶ್ರೀ ಶಂಕರಲಿಂಗಪ್ಪ ಸರ್ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು*.
ನಲಿಕಲಿ ನೋಡಲ್ ಅಧಿಕಾರಿಗಳು ಬಿ.ಆರ್.ಪಿ.
೪ ಕ್ಲಸ್ಟರ್ ಗಳ
ಸಿ ಆರ್.ಪಿ.ಯವರು ಅಜೀಂ ಪ್ರೇಮಜಿ ಫೌಂಡೇಶನ್ ಸಂಯೋಜಕರು ಉಪಸ್ಥಿತರಿದ್ದರು.
ಚಟುವಟಿಕೆಗಳಲ್ಲಿ
ಸುಗಮಕಾರರ ಭಾಗವಹಿಸುವಿಕೆ ತುಂಬಾ ಚೆನ್ನಾಗಿತ್ತು.
*ಎಲ್ಲರ ಸಹಕಾರದಿಂದ ಸಮಾಲೋಚನೆ ಸಭೆ ಯಶಸ್ವಿಯಾಗಿ ನಡೆಯಿತು*.
-
Click Here
-
Click Here
-
Click Here































































































































