ಶಾಲಾ ಶಿಕ್ಷಣ ಇಲಾಖೆ ಹಾಗೂ ಟಾಟಾ ಕಲಿಕಾ ಟ್ರಸ್ಟ್ ಯಾದಗಿರಿ ಇವರ ಸಹಯೋಗದಲ್ಲಿ ದಿನಾಂಕ 28,29,30, ಸೆಪ್ಟಂಬರ್ ರಂದು ಕಲಬುರಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ನಡೆದ ಯಾದಗಿರಿ ಮತ್ತು ಗುರುಮಿಟಕಲ್ ತಾಲೂಕುಗಳ CRP & BRP ಯವರಿಗೆ ಹಾಗೂ ನಲಿಕಲಿ ಸಂಪನ್ಮೂಲ ವ್ಯಕ್ತಿಗಳಿಗೆ ನಡೆದ 3 ದಿನಗಳ ನಲಿ-ಕಲಿ ಕಾರ್ಯಗಾರದ ಮೂರನೆಯ ದಿನ ಪ್ರಾಯೋಗಿಕ ತರಗತಿ ವೀಕ್ಷಣೆಗಾಗಿ ಚಿತ್ತಾಪೂರ ತಾಲೂಕಿನ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಭಂಕೂರ್ ಗೆ ಭೇಟಿ ನೀಡಿ ಪ್ರಾಯೋಗಿಕ ತರಗತಿ ವೀಕ್ಷಿಸಲಾಯಿತು. ಈ ಶಾಲೆಯಲ್ಲಿ ನಲಿಕಲಿ ತರಗತಿಗಳು ತುಂಬಾ ಆಕರ್ಷಣೀಯವಾಗಿವೆ ನಲಿಕಲಿ ಸುಗಮಕಾರರಾದ ಶ್ರೀಮತಿ ಕಲಾವತಿ ಮೇಡಂ ರವರು ಉತ್ತಮವಾಗಿ ತರಗತಿ ನಿರ್ವಹಣೆ ಮಾಡಿದರು ಗುಂಪು ತಟ್ಟೆಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಉತ್ತಮವಾಗಿತ್ತು ಮಕ್ಕಳ ಕಲಿಕೆ ಉತ್ತಮವಾಗಿತ್ತು
ಕಲಿಕೋಪಕರಣಗಳಿಗೆ ಈ ಶಾಲೆಯಲ್ಲಿ ಬರವಿಲ್ಲ ನಲಿಕಲಿಯ ಎಲ್ಲಾ ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ ನಲಿಕಲಿ ತರಗತಿಗಳನ್ನು ವೀಕ್ಷಿಸಿದ ಎಲ್ಲರೂ ಶಾಲೆಯ ಕುರಿತು ನಲಿಕಲಿ ತರಗತಿಗಳ ಕುರಿತು ಪ್ರಶಂಶನೀಯ ಹಿಮ್ಮಾಹಿತಿ ನೀಡಿದರು.
ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಈ ಶಾಲೆಯ ಶ್ರೀಮತಿ ರಾಜೇಶ್ವರಿ ಮೇಡಂ ರವರು ಮಕ್ಕಳಿಗೆ ಉಪಯುಕ್ತ ವಾಗುವಂತಹ ಮಕ್ಕಳ ಜ್ಞಾನ ಹೆಚ್ಚಿಸುವಂತಹ ಅನೇಕ ಕಲಿಕೋಪಕರಣಗಳನ್ನು ಸಿದ್ಧಪಡಿಸಿದ್ದಾರೆ.
ನಲಿಕಲಿಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆರ್ ಡಿ ರವೀಂದ್ರ ಸರ್ ರವರು ತರಗತಿ ವೀಕ್ಷಣೆಯ ಕುರಿತು ಚರ್ಚಿಸಿದರು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚಂದ್ರಕಲಾ ಗೂಗಲ್ ಮೇಡಂ ಟಾಟಾ ಕಲಿಕಾ ಟ್ರಸ್ಟ್ ನ ಜಿಲ್ಲೆಯ ಮುಖ್ಯಸ್ಥರಾದ ನಿರ್ಮಲ ಮೇಡಮ್ ಮತ್ತು ತಂಡದವರು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಅನಂತಸ್ವಾಮಿ ಸರ್ ಸಿದ್ದು ಸರ್ ಕರಿಗೂಳಿ ದುಗನೂರ ರವರು ಯಾದಗಿರಿ ಮತ್ತು ಗುರುಮಿಟಕಲ್ ತಾಲೂಕುಗಳ CRP&BRP ಗಳು ನಲಿಕಲಿ ಸಂಪನ್ಮೂಲ ವ್ಯಕ್ತಿಗಳು ಶಾಲೆಯ ಮುಖ್ಯ ಗುರುಗಳಾದ ಕನಕಪ್ಪ ಸರ್ ರವರು CRP ಮರೆಪ್ಪ ಭಜಂತ್ರಿ ಸರ್
ಶಾಲೆಯ ಶಿಕ್ಷಕಿಯರಾದ ಶ್ರೀಮತಿ ರಾಜೇಶ್ವರಿ ಮೇಡಂ ಶ್ರೀಮತಿ ತಾರಕೇಶ್ವರಿ ಮೇಡಂ ಶ್ರೀಮತಿ ವಿಜಯ ಕುಮಾರಿ ಮೇಡಂ ರವರು ಉಪಸ್ಥಿತರಿದ್ದರು.
ಕಲಿಕಾ ಸ್ನೇಹಿ ಶಾಲಾ ವಾತಾವರಣ ರೂಪಿಸಲು ಶ್ರಮಿಸಿರುವ ಶಾಲೆಯ ಮುಖ್ಯ ಗುರುಗಳಿಗೂ ಸಿಬ್ಬಂದಿಯವರಿಗೂ SDMC ಪದಾಧಿಕಾರಿಗಳಿಗೂ ಗ್ರಾಮಸ್ಥರಿಗೂ
ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನ ಮಾಡಿರುವ ಅಧಿಕಾರಿ ವೃಂದದವರಿಗೂ ಅನುಷ್ಠಾನ ಅಧಿಕಾರಿಗಳಿಗೂ ವಿಶೇಷವಾಗಿ ಇವತ್ತು ಶನಿವಾರ ಇದ್ದರೂ ಕೂಡ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ 4;30ರ ವರೆಗೆ ಶಾಲೆಯಲ್ಲಿ ಉಪಸ್ಥಿತರಿದ್ದು ನಲಿಕಲಿ ಪ್ರಾಯೋಗಿಕ ತರಗತಿಯಲ್ಲಿ ಭಾಗವಹಿಸಿರುವ ನಲಿಕಲಿ ಮಕ್ಕಳಿಗೆ ಶಾಲೆಯ ಹಿರಿಯ ತರಗತಿಗಳ ಮಕ್ಕಳಿಗೆ ಸಮಸ್ತ ನಲಿಕಲಿ ಬಳಗದ ಪರವಾಗಿ ತುಂಬು ಹೃದಯದ ವಂದನೆಗಳು.
*ಇಚ್ಛೆ ಮತ್ತು ಪ್ರಯತ್ನಶೀಲತೆ ಇದ್ದರೆ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಒಬ್ಬ ಶಿಕ್ಷಕ/ಶಿಕ್ಷಕಿ ಮನಸ್ಸು ಮಾಡಿದರೆ ಮಕ್ಕಳ ಕಲಿಕೆಗೆ ಏನೆಲ್ಲಾ ಮಾಡಬಹುದು ಎನ್ನುವ ಮಾತಿಗೆ ಈ ಶಾಲೆ ಉತ್ತಮವಾದ ಉದಾಹರಣೆಯಾಗಿದೆ.*
💐💐🙏🙏

































































































































