Saturday, October 26, 2024

ನಲಿಕಲಿ ಸಮಾಲೋಚನೆ ಸಭೆ TLC ಮುಧೋಳ.26-10-2024

 

























































ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ 
ಇಂದು ಮುಧೋಳ TLC ಯಲ್ಲಿ ಲಿಂಗಮಪಲ್ಲಿ,ರಿಬ್ಬನಪಲ್ಲಿ, ಮುಧೋಳ, ಮದನಾ ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗಾಗಿ ನಲಿ ಕಲಿ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಮೊದಲನೇ ಅವಧಿಯಲ್ಲಿ ಗಣಿತ ವಿಷಯದ ಗುಣಿತದ ಕುಣಿತ (ಗುಣಾಕಾರ) ಪ್ರಾಯೋಗಿಕ ತರಗತಿ ನೀಡಲಾಯಿತು ಎರಡನೆಯ ಅವಧಿಯಲ್ಲಿ ENK ವಿಷಯದ ನವೆಂಬರ್ ತಿಂಗಳಿನ Level 1 ಮತ್ತು 2 ರ ಚಟುವಟಿಕೆಗಳ ಕುರಿತು ಪ್ರಾಯೋಗಿಕ ತರಗತಿ ನೀಡಲಾಯಿತು ಮೂರನೇ ಅವಧಿಯಲ್ಲಿ ಭಾಷೆ ವಿಷಯದ ಎರಡನೇ ತರಗತಿಯ ಮಾತಿನ ಮಂಟಪ ಪಾಠದ ಪ್ರಾಯೋಗಿಕ ತರಗತಿ ನೀಡಲಾಯಿತು ನಾಲ್ಕನೇ ಅವಧಿಯಲ್ಲಿ ಪರಿಸರ ಅಧ್ಯಯನದ ನವೆಂಬರ್ ತಿಂಗಳಿನ ಚಟುವಟಿಕೆಗಳು ಮತ್ತು ದಾಖಲೆಗಳ ನಿರ್ವಹಣೆ ಸುಗಮಕಾರರು ಕೇಳಿರುವ ಪ್ರಶ್ನೆಗಳ ಕುರಿತು ಚರ್ಚಿಸಲಾಯಿತು.
ಇಂದಿನ ಸಮಾಲೋಚನೆ ಸಭೆಗೆ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಯುತ ಶಂಕರಲಿಂಗಪ್ಪ ಸರ್ ರವರು ಭಾಗವಹಿಸಿ ಮಾರ್ಗದರ್ಶನ ಮಾಡಿದರು ನಲಿ ಕಲಿ ನೋಡಲ್ ಅಧಿಕಾರಿಗಳಾದ ಶ್ರೀ ಧರ್ಮಪಾಲ ರವರು CRP ಗಳಾದ ಶ್ರೀ ದೇವೇಂದ್ರಪ್ಪ ಯಾದವ್ ಶ್ರೀ ಶರಣು ಪರಮಾ ಶ್ರೀ ಸಾಯಬಣ್ಣ ಪೂಜಾರಿ ರವರು ಹಾಗೂ ಅಜೀಮ್ ಪ್ರೇಮ ಜಿ ಫೌಂಡೇಶನ್ ನ ಸಂಯೋಜಕರಾದ ಶ್ರೀ ಶರಣು ಸಲಗರೆ ಸರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲಾ, ಶ್ರೀಮತಿ ರತ್ನಬಾಯಿ, ಶಕುಂತಲಾ, 
ಕರಿಗೂಳಿ ದುಗನೂರ 4 ಕ್ಲಸ್ಟರ್ ಗಳ ಸುಮಾರು 45 ಕ್ಕು ಹೆಚ್ಚು ನಲಿಕಲಿ ಸುಗಮಕಾರರು ಭಾಗವಹಿಸಿದ್ದರು ಇಂದಿನ ಸಮಾಲೋಚನೆ ಸಭೆಯ ಎಲ್ಲಾ ಅವಧಿಗಳ ಚಟುವಟಿಕೆಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು.
💐💐🙏🙏