Wednesday, July 31, 2024
Saturday, July 13, 2024
ಲಿಂಗಂಪಲ್ಲಿ ಮತ್ತು ರಿಬ್ಬನಪಲ್ಲಿ ಕ್ಲಸ್ಟರ್ ನಲಿಕಲಿ ಮೊದಲನೆಯ ಸಮಾಲೋಚನಾ ಸಭೆ GHPS K R ಪಲ್ಲಿ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸೇಡಂ ರವರ ಸಹಯೋಗದಲ್ಲಿ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ K R ಪಲ್ಲಿ ಯಲ್ಲಿ ಲಿಂಗಂಪಲ್ಲಿ ಮತ್ತು ರಿಬ್ಬನಪಲ್ಲಿ ಕ್ಲಸ್ಟರ್ ಗಳ ಮೊದಲನೆಯ ನಲಿಕಲಿ ಸಮಾಲೋಚನೆ ಸಭೆ ನಡೆಯಿತು ಮೊದಲನೆಯ ಅವಧಿಯಲ್ಲಿ FLN ಆಧರಿಸಿ ಗಣಿತ ವಿಷಯದ ಪ್ರಾಯೋಗಿಕ ತರಗತಿಯನ್ನು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳಾದ ಶರಣು ಸಲಗರೆ ಸರ್ ರವರು ನಡೆಸಿದರು ಮಕ್ಕಳ ಭಾಗವಹಿಸುವಿಕೆ ತುಂಬಾ ಉತ್ತಮವಾಗಿತ್ತು.
ಎರಡನೇ ಅವಧಿಯಲ್ಲಿ ENK ಪ್ರಾಯೋಗಿಕ ತರಗತಿಯನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಅರ್ಚನಾ ಮೇಡಮ್ ರವರು ಮಕ್ಕಳನ್ನು ಉತ್ತಮವಾದ ರೀತಿಯಲ್ಲಿ ತೊಡಗಿಸಿಕೊಂಡು ತರಗತಿ ನಿರ್ವಹಿಸಿದರು. ಮೂರನೆಯ ಅವಧಿಯಲ್ಲಿ 2024-25 ಸಾಲಿನಲ್ಲಿ ನಲಿಕಲಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಮತ್ತು ಜುಲೈ/ಆಗಸ್ಟ್ ತಿಂಗಳಿನ ಚಟುವಟಿಕೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರು ರವರು ವಿಷಯ ಮಂಡನೆ ಮಾಡಿದರು ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಸಂಪತ್ ಕುಮಾರ ಸರ್ ರವರು FLN ನಮೂನೆಗಳನ್ನು ಭರ್ತಿ ಮಾಡುವ ಕುರಿತು ಮಾಹಿತಿ ಹಂಚಿಕೊಂಡರು.
ನಾಲ್ಕನೆಯ ಅವಧಿಯಲ್ಲಿ ನಲಿಕಲಿ ಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು ಮತ್ತು ರೂಪಣಾತ್ಮಕ ಮೌಲ್ಯಮಾಪನ 1 ರ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ ಮಾಹಿತಿ ನೀಡಿದರು. ಇಂದಿನ ಕಾರ್ಯಗಾರಕ್ಕೆ BRP ಯವರಾದ ಶ್ರೀ ಉಮಾಕಾಂತ ಸರ್ ಶ್ರೀ ಧರ್ಮಪಾಲ್ ಸರ್ ಅಜೀಮ್ ಪ್ರೇಮ ಜಿ ಫೌಂಡೇಶನ ಶ್ರೀ ಗಂಗಾಧರ್ ಸ್ವಾಮಿ ಸರ್ ರವರು ಭೇಟಿ ನೀಡಿದರು CRP ಗಳಾದ ಶ್ರೀ ದೇವೇಂದ್ರಪ್ಪ ಯಾದವ್ ಸರ್ ಮತ್ತು ಶ್ರೀ ಸಾಯಿಬಣ್ಣ ಪೂಜಾರಿ ಸರ್ ಉಪಸ್ಥಿತರಿದ್ದರು ಇಂದಿನ ಸಮಾಲೋಚನಾ ಸಭೆಯ ಅವಧಿಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು.
Friday, July 12, 2024
Wednesday, July 10, 2024
Subscribe to:
Posts (Atom)
-
Click Here
-
Click Here
-
Click Here


























































