Saturday, August 5, 2023

2 ನೇ ನಲಿಕಲಿ ಸಮಾಲೋಚನೆ ಸಭೆ TLC ಮುಧೋಳ




 



















































ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ಇಂದು TLC  ಮುಧೋಳದಲ್ಲಿ ಮದನಾ, ಮುಧೋಳ, ಲಿಂಗಂಪಲ್ಲಿ, ರಿಬ್ಬನಪಲ್ಲಿ, ಕಾನಗಡ್ಡ, ಮೋತಕಪಲ್ಲಿ,ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗಾಗಿ 2ನೇಯ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾಲೋಚನೆ ಸಭೆಯಲ್ಲಿ ನಲಿಕಲಿ ನೋಡಲ್ ಅಧಿಕಾರಿಗಳಾದ ಶ್ರೀ ಧರ್ಮಪಾಲ ಸರ್ ರವರು ಹಾಗೂ ಸಿ ಆರ್ ಪಿ ಗಳಾದ ಶ್ರೀ ದೇವೇಂದ್ರಪ್ಪ ಯಾದವ್ ಶ್ರೀ ವೀರಣ್ಣಗೌಡ ಪಾಟೀಲ್ ಶ್ರೀ ಸಾಯಬಣ್ಣ ಪೂಜಾರಿ ಶ್ರೀ ನರಸಪ್ಪ ಪೂಜಾರಿ, ಸೇಡಂ ಮತ್ತು ಚಿಂಚೋಳಿ ಅಜೀಮ ಪ್ರೇಮಜಿ ಫೌಂಡೇಶನ್ ನ ಮುಖ್ಯಸ್ಥರಾದ ಶ್ರೀ ಗಂಗಾಧರ್ ಸ್ವಾಮಿ ಸರ್, ಮುಧೋಳ TLC ಸಂಯೋಜಕರಾದ ಶ್ರೀ ಶರಣ ಕುಮಾರ ಸಲಗಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ, ಶ್ರೀಮತಿ ರತ್ನಬಾಯಿ, ಶ್ರೀಮತಿ ಆಶಾ ಎಮ್, ಉಪಸ್ಥಿತರಿದ್ದರು.
6 ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರು ಹಾಗೂ ಅತಿಥಿ ಶಿಕ್ಷಕ/ ಶಿಕ್ಷಕಿಯರು ಭಾಗವಹಿಸಿದ್ದರು.
ಮೊದಲನೆಯ ಅವಧಿ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಸುಗಮಕಾರರಿಂದ ತರಗತಿ ಪ್ರಕ್ರಿಯೆ ಕುರಿತು ಅನುಭವ ಹಂಚಿಕೆ ಪಡೆದುಕೊಳ್ಳಲಾಯಿತು
ಎರಡನೆಯ ಅವಧಿ 11 ಗಂಟೆಯಿಂದ 12:30 ರ ವರೆಗೆ ಆಗಸ್ಟ್ ತಿಂಗಳಿನಲ್ಲಿ ನಿರ್ವಹಿಸಬೇಕಾದ ಕಲಿಕೆಯ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು ಆಗಸ್ಟ್ ತಿಂಗಳಿನ ಭಾಷೆ ವಿಷಯದ ಕಲಿಕಾ ಏಣಿಯಯಲ್ಲಿನ ಚಟುವಟಿಕೆಗಳ ಪರಿಚಯದ ಜೊತೆಗೆ ಅಭ್ಯಾಸ ಪುಸ್ತಕದಲ್ಲಿ ಬರುವ ಅಭ್ಯಾಸದ ಹಾಳೆಗಳ ಚಟುವಟಿಕೆಗಳನ್ನು ಗುಂಪುವಾರು ನೀಡಿ ವಿಷಯ ಮಂಡನೆ ಮಾಡಿಸಿ  ಚರ್ಚಿಸಲಾಯಿತು.
ಮೂರನೇ ಅವಧಿ 12:30 ರಿಂದ 2 ಗಂಟೆ ವರೆಗೆ ಗಣಿತ ವಿಷಯದ ಆಗಸ್ಟ್ ತಿಂಗಳಿನ ಮೈಲುಗಲ್ಲುಗಳ ಕುರಿತು ಕಲಿಕಾ ಏಣಿಗೆ ಅನುಗುಣವಾಗಿ ನಿರ್ವಹಿಸಬೇಕಾಗಿರುವ ಚಟುವಟಿಕೆಗಳ ಪರಿಚಯ ಮಾಡಿಸುವುದರ ಜೊತೆಗೆ ಅಭ್ಯಾಸ ಪುಸ್ತಕದ ಚಟುವಟಿಕೆಗಳನ್ನು ಸುಗಮಕಾರರಿಗೆ ಗುಂಪುವಾರು ಚಟುವಟಿಕೆಗಳನ್ನು ನೀಡಿ ವಿಷಯ ಮಂಡನೆ ಮಾಡಿಸಲಾಯಿತು.
ನಾಲ್ಕನೆಯ ಅವಧಿ 2:40 ರಿಂದ 3:45 ರ ವರೆಗೆ  ಆಗಸ್ಟ್ ತಿಂಗಳಲ್ಲಿ ನಿರ್ವಹಿಸಬೇಕಾಗಿರುವ ಇಂಗ್ಲೀಷ್ ವಿಷಯದ ಚಟುವಟಿಕೆಗಳ L&S ಮತ್ತು R&W ಕಾರ್ಡುಗಳನ್ನು Sight words, picture cards ಅಭ್ಯಾಸ ಪುಸ್ತಕದ ಚಟುವಟಿಕೆಗಳನ್ನು ಪರಿಚಯಿಸಲಾಯಿತು. 
ಐದನೆಯ ಅವಧಿ 4 ಗಂಟೆಯಿಂದ 5:15ರ ವರೆಗೆ ಪರಿಸರ ಅಧ್ಯಯನದ ಆಗಸ್ಟ್ ತಿಂಗಳಿನ ಕಲಿಕಾ ಏಣಿಯ ಪ್ರಕಾರ ನಿರ್ವಹಿಸಬೇಕಾಗಿರುವ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.
ಕೊನೆಯ ಅವಧಿ 5:15ರಿಂದ 5:30 ರ  ರೂಪಣಾತ್ಮಕ ಮೌಲ್ಯಮಾಪನ ೧ ರ ನಿರ್ವಹಣೆ ಕುರಿತು ಸುಗಮಕಾರರ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ದಿನಚರಿಯಲ್ಲಿ ಪ್ರತಿದಿನ ನಿರ್ವಹಿಸುವ ಚಟುವಟಿಕೆಗಳನ್ನು ನಮೂದು ಮಾಡಲು ಸುಗಮಕಾರರಿಗೆ ತಿಳಿಸಲಾಯಿತು. ಶಿಕ್ಷಕರ ವೈಯಕ್ತಿಕ ಅಂಕವಹಿ ಹಾಗೂ ಕ್ರೂಡಿಕೃತವಹಿಗಳನ್ನು ಪರಿಚಯಿಸಲಾಯಿತು.
ಒಟ್ಟಾರೆಯಾಗಿ ಇಂದಿನ ನಲಿಕಲಿ ಸಮಾಲೋಚನೆ ಸಭೆ ಎಲ್ಲಾ ಅನುಷ್ಠಾನ ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ರವರ ಸಹಕಾರದಿಂದ  ಉತ್ತಮವಾಗಿ ಮೂಡಿ ಬಂದಿತು ಇಂದಿನ ಎಲ್ಲಾ ಅವಧಿಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು.
💐💐🙏🙏🙏