Tuesday, May 30, 2023

ನಲಿ ಕಲಿ ತರಬೇತಿಯ ಪೂರ್ವ ಸಿದ್ಧತಾ ಸಭೆ.

 






ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕಲಬುರಗಿ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆ ಕಲಬುರಗಿ ಇವರ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ನಲಿಕಲಿ ಸುಗಮಕಾರರಿಗೆ ನಡೆಯುವ ಒಂದು ದಿನದ ನಲಿಕಲಿ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳುವ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ   ಚರ್ಚಿಸಲಾಯಿತು ವಿದ್ಯಾ ಪ್ರವೇಶ ,ಸೇತುಬಂಧ, ನಲಿ ಕಲಿ/ಪರಿಷ್ಕರಣೆ, ಅನುಷ್ಠಾನ, ಮೌಲ್ಯಮಾಪನ ಮತ್ತು ದಾಖಲೆಗಳ ನಿರ್ವಹಣೆ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು. ಇಂದಿನ ಸಭೆಯಲ್ಲಿ ಜಿಲ್ಲಾ ನಲಿಕಲಿ ನೋಡಲ ಅಧಿಕಾರಿಗಳಾದ

ಶ್ರೀ ಶಶಿಧರ ಬಿರಾದಾರ ಸರ್ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಶ್ರೀ ಆನಂದ್ ಸರ್ ಸಂಪನ್ಮೂಲ ವ್ಯಕ್ತಿಗಳು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.