Thursday, August 25, 2022

ಮುಧೋಳ TLC ಯಲ್ಲಿ ನಡೆದ ೨ ನೇ ನಲಿಕಲಿ ಸಮಾಲೋಚನೆ ಸಭೆ

ದಿನಾಂಕ ೨೫-೦೮-೨೦೨೨ ರಂದು ಮುಧೋಳ ವಲಯದ ನಲಿಕಲಿ ಸುಗಮಕಾರರಿಗಾಗಿ ಮತ್ತು ಅತಿಥಿ ಶಿಕ್ಷಕ/ಶಿಕ್ಷಕಿಯರಿಗಾಗಿ ಸಮಾಲೋಚನೆ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಭೆಯಲ್ಲಿ ನಲಿಕಲಿ ನೊಡಲ್ ಅಧಿಕಾರಿಗಳಾದ ಶ್ರೀ ಧರ್ಮಪಾಲ್ ರವರು ಮತ್ತು ಅಜೀಂ ಪ್ರೇಮಜಿ ಫೌಂಡೇಶನ್ ಸಂಯೋಜಕರಾದ ಶ್ರೀ ಗಂಗಾಧರ ಸ್ವಾಮಿ ರವರು ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ ರವರು ಉಪಸ್ಥಿತರಿದ್ದರು.
*ಚರ್ಚಿಸಿರುವ ವಿಷಯಗಳು* 
ಸುಗಮಕಾರರಿಂದ ಅನುಭವ ಹಂಚಿಕೆ
ತರಗತಿಯ ಸಿದ್ದತೆ
ಶಿಕ್ಷಕರ ಸಿದ್ದತೆ
ಮಕ್ಕಳ ಸಿದ್ದತೆ
ಸೆಪ್ಟೆಂಬರ್ ತಿಂಗಳ ಮಾಹೆವಾರು ಹಂಚಿಕೆ 
೧,೨,೩, ತರಗತಿಗಳ ಕಲಿಕಾ ಏಣಿಗಳ ಪರಿಚಯ
ಕಲಿಕಾ ಚೇತರಿಕೆ ಅಭ್ಯಾಸ ಪುಸ್ತಕಗಳ ಪರಿಚಯ
ಸೆಪ್ಟೆಂಬರ್‌ ತಿಂಗಳಲ್ಲಿ ೧,೨,೩, ತರಗತಿಗಳ ಕಲಿಕಾ ಪ್ರಕ್ರಿಯೆ
ದಾಖಲೆಗಳ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.


No comments:

Post a Comment