Saturday, December 3, 2022

ನಲಿಕಲಿ ಪ್ರಗತಿ ಪರಿಶೀಲನಾ ಸಭೆ TLC ಮುಧೋಳ





















































































 ಇಂದು ಮುಧೋಳ TLC ಕೇಂದ್ರದಲ್ಲಿ ನಡೆದ ಮದನಾ ಮುಧೋಳ ಲಿಂಗಂಪಲ್ಲಿ ರಿಬ್ಬನಪಲ್ಲಿ ಕ್ಲಸ್ಟರಗಳ ನಲಿಕಲಿ ಪ್ರಗತಿ ಪರಿಶೀಲನೆ ಸಭೆಯ *ಮೊದಲನೆ ಅವಧಿಯಲ್ಲಿ*
ಪ್ರತಿ ಸುಗಮಕಾರರಿಂದ ಪ್ರತಿ ನಲಿಕಲಿ ಘಟಕಗಳ ಕಲಿಕಾ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಯಿತು.
*ಎರಡನೆ ಅವಧಿಯಲ್ಲಿ* ಭಾಷೆ ಮತ್ತೆ ಗಣಿತದ ಗುಂಪು ತಟ್ಟೆಗಳು, ಪ್ರಗತಿನೋಟಗಳು ಮತ್ತು ನಿಪುಣ ಭಾರತ ಕಲಿಕಾ ಹಾಳೆಗಳ ಪರಿಚಯ ಗುಂಪುವಾರು ಹಂಚಿ ಪ್ರತಿ ಗುಂಪಿನಿಂದ ಮಂಡನೆ ಮಾಡಿಸಲಾಯಿತು. 
*ಮೂರನೆ ಅವಧಿಯಲ್ಲಿ*
 ಪರಿಷ್ಕರಿಸಿದ ಪ್ರಗತಿನೋಟ ಮತ್ತು ಕಲಿಕಾ ಏಣಿಗೆ ಅನುಗುಣವಾಗಿ ಇಂಗ್ಲಿಷ್ ವಿಷಯದ ನಿರ್ವಹಣೆ ಜೊತೆಗೆ ರೂಪಣಾತ್ಮಕ ಮೌಲ್ಯಮಾಪನ ೨ ನಿರ್ವಹಿಸಿದ ಮಾಹಿತಿ ಜೊತೆಗೆ ಸಂಕಲನಾತ್ಮಕ ಮೌಲ್ಯಮಾಪನ ೧ ನಿರ್ವಹಣೆ ಕುರಿತು ಚರ್ಚೀಸಲಾಯಿತು.
*ನಾಲ್ಕನೆಯ ಅವಧಿಯಲ್ಲಿ*
ಪರಿಸರ ಅಧ್ಯಯನ ಗುಂಪುತಟ್ಟೆಗಳು ಮತ್ತು ಡಿಸೆಂಬರ್ ತಿಂಗಳಲ್ಲಿ ನಿರ್ವಹಿಸಬೇಕಾದ ಚಟುವಟಿಕೆಗಳು ಮತ್ತು ನಲಿಕಲಿಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು ನಲಿಕಲಿ ಅನುಷ್ಠಾನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚೀಸಲಾಯಿತು.*ಇಂದಿನ ನಲಿಕಲಿ ಪ್ರಗತಿ ಪರಿಶೀಲನೆ ಸಭೆಗೆ ಕ್ಷೇತ್ರ ಸಮನ್ವಯಾಧೀಕಾರಿಗಳಾದ ಶ್ರೀ ಶಂಕರಲಿಂಗಪ್ಪ ಸರ್ ಭೇಟಿ ನೀಡಿ ಮಾರ್ಗದರ್ಶನ ಮಾಡಿದರು ಬಿ,ಆರ್, ಪಿ,ಯವರು, ಸಿ,ಆರ್, ಪಿ,ಯವರು ಅಜೀಂ ಪ್ರೇಮಜಿ ಪೌಂಡೇಶನ್ ಸಂಯೋಜಕರು ೪ ಕ್ಲಸ್ಟರ್ ಗಳ ಸುಗಮಕಾರರು ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು*
ಒಟ್ಟಾರೆಯಾಗಿ ಇಂದಿನ ನಲಿಕಲಿ ಪ್ರಗತಿ ಪರಿಶೀಲನಾ ಸಭೆ ಎಲ್ಲರ ಸಹಕಾರ ಮಾರ್ಗದರ್ಶನದಿಂದ ಯಶಸ್ವಿಯಾಗಿ ಜರುಗಿತು.

No comments:

Post a Comment