Saturday, January 7, 2023

ನಲಿಕಲಿ ಪ್ರಗತಿ ಪರಿಶೀಲನಾ ಸಭೆ ಸ,ಹಿ,ಪ್ರಾ,ಶಾಲೆ,ಶಕಲಾಸಪಲ್ಲಿ TLC ಮುಧೋಳ








































































 ಇಂದು ಸ,ಹಿ,ಪ್ರಾ,ಶಾಲೆ, ಶಕಲಾಸಪಲ್ಲಿಯಲ್ಲಿ ಮೋತಕಪಲ್ಲಿ,ಕಾನಾಗಡ್ಡಾ,

ದುಗನೂರ,ಕೋಲಕುಂದಾ ಮತ್ತುTLC ಮುಧೋಳದಲ್ಲಿ ಮುಧೋಳ,ರಿಬ್ಬನಪಲ್ಲಿ,

ಲಿಂಗಂಪಲ್ಲಿ,ಮದನಾ,ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಲಾಯಿತು ಮೊದಲನೆ ಅವಧಿಯಲ್ಲಿ ಪ್ರತಿಯೊಬ್ಬರಿಗೂ ಕಲಿಕಾ ಪ್ರಕ್ರಿಯೆ ಕುರಿತು ಅನುಭವ ಹಂಚಿಕೊಳ್ಳುಲು ಅವಕಾಶ ಮಾಡಿ ಕೊಡಲಾಯಿತು.ಎರಡನೆ ಅವಧಿಯಲ್ಲಿ ಭಾಷೆ ಮತ್ತು ಗಣಿತ ವಿಷಯದ ಜನೆವರಿ ತಿಂಗಳ ಪ್ರಗತಿನೋಟ ಪರಿಚಯದ ಜೊತೆಗೆ ಭಾಷೆ ವಿಷಯದ ಮೈಲ್ಲುಗಲ್ಲುವಾರು ಚಟುವಟಿಕೆಗಳು ನಿಪುಣ ಭಾರತ ಕಲಿಕಾ ಹಾಳೆಗಳ ಪರಿಚಯ ಪ್ರತಿ ಗುಂಪಿನಿಂದ ಮಾಡಿಸಲಾಯಿತು.

ಮೂರನೆ ಅವಧಿಯಲ್ಲಿ ENK ವಿಷಯಕ್ಕೆ ಸಂಬಂಧಿಸಿದಂತೆ ಜನೆವರಿ ತಿಂಗಳ L&S ಮತ್ತು R&W ಚಟುವಟಿಕೆಗಳ ಕುರಿತು ಚರ್ಚೀಸಲಾಯಿತು ಮತ್ತು ಕೊನೆಯ ಅವಧಿಯಲ್ಲಿ ಪರಿಸರ ಅಧ್ಯಯನ ಚಟುವಟಿಕೆಗಳ ಜೊತೆಗೆ ದಾಖಲೆಗಳ ನಿರ್ವಹಣೆ ನಲಿಕಲಿಯಲ್ಲಿ ಮೌಲ್ಯಮಾಪನದ ಕುರಿತು ಚರ್ಚೀಸಲಾಯಿತು ಸದರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಲಿಕಲಿ ನೋಡಲ್ ಅಧಿಕಾರಿಗಳು,

 ಸಿ,ಆರ್, ಪಿ,ಯವರು, ಅಜೀಂ ಪ್ರೇಮಜಿ ಫೌಂಡೇಶನ್ ಸಂಯೋಜಕರು ಸಂಪನ್ಮೂಲ ವ್ಯಕ್ತಿಗಳು ಹಾಗೂ ನಲಿಕಲಿ ಸುಗಮಕಾರರು ಭಾಗವಹಿಸಿದ್ದರು ಎಲ್ಲರ ಸಹಕಾರದಿಂದ ಪ್ರಗತಿ ಪರಿಶೀಲನಾ ಸಭೆ ಯಶಸ್ವಿಯಾಗಿ ನಡೆಯಿತು.

No comments:

Post a Comment