Thursday, June 1, 2023

ತಾಲೂಕು ಹಂತದ ಸಂಪನ್ಮೂಲ ವ್ಯಕ್ತಿಗಳಿಗೆ ನಲಿಕಲಿ ಪುನಶ್ಚೇತನ ಕಾರ್ಯಗಾರ
















 ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲಬುರಗಿ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಕಲಬುರ್ಗಿ ಇವರ ಸಹಯೋಗದಲ್ಲಿ ಇಂದು ನಡೆದ ತಾಲೂಕು ಹಂತದ ಸಂಪನ್ಮೂಲ ವ್ಯಕ್ತಿಗಳಿಗೆ ಒಂದು ದಿನದ ನಲಿ-ಕಲಿ ಪುನಶ್ಚೇತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು ತಂಡ 2 ರಲ್ಲಿ ಚಿತ್ತಾಪೂರ್, ಆಳಂದ್ ,ಅಫಜಲಪೂರ, ಕಲಬುರಗಿ ದಕ್ಷಿಣ ವಲಯ 4 ತಾಲೂಕುಗಳ ಪ್ರತಿ ತಾಲೂಕಿನಿಂದ 6 ಜನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು ಈ ಕಾರ್ಯಗಾರದಲ್ಲಿ ವಿದ್ಯೆ ಪ್ರವೇಶ, ಸೇತು ಬಂದ ನಲಿ ಕಲಿ ಪರಿಷ್ಕರಣೆ ಮತ್ತು ಕಲಿಕಾ ಏಣಿ, ಇಂಗ್ಲಿಷ್ ವಿಷಯದ ಸೇತುಬಂಧ ಮೌಲ್ಯಮಾಪನ ಮತ್ತು ದಾಖಲೆಗಳ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಲಾಯಿತು
. ಈ ಕಾರ್ಯಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಡವಳಗಿ ಮೇಡಂ ರವರು ಭಾಗವಹಿಸಿ ಮಾರ್ಗದರ್ಶನ ಮಾಡಿದರು ಜಿಲ್ಲಾ ನಲಿಕಲಿ ನೋಡಲ್ ಅಧಿಕಾರಿಗಳಾದ 

ಶ್ರೀ ಶಶಿಧರ್ ಬಿರಾದರ್ ಸರ್ ಅವರು ಕಾರ್ಯಗಾರದ ಉದ್ದೇಶಗಳನ್ನು ಕುರಿತು ಮಾತನಾಡಿದರು ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಗುರುರಾಜ್ ಕುಲಕರ್ಣಿ ಸರ್ ರವರು ಅಜೀಮ ಪ್ರೇಮಜಿ ಫೌಂಡೇಶನ್ ರವರು ನಲಿ ಕಲಿ ಅನುಷ್ಠಾನಕ್ಕೆ ಹಾಕಿಕೊಂಡಿರುವ ಕ್ರಿಯಾಯೋಜನೆ ಕುರಿತು ಮಾತನಾಡಿದರು ಸದರಿ ಕಾರ್ಯಗಾರದಲ್ಲಿ ಜಿಲ್ಲಾ ಹಂತದ ಸಂಪನ್ಮೂಲ ವ್ಯಕ್ತಿಗಳು ತಾಲೂಕು ಹಂತದ ಸಂಪನ್ಮೂಲ ವ್ಯಕ್ತಿಗಳು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಗಾರದ ವಿಷಯಗಳ ಚರ್ಚೆ ಮುಗಿದ ನಂತರ ಪ್ರತಿ ತಾಲೂಕುಗಳ ಸಂಪನ್ಮೂಲ ವ್ಯಕ್ತಿಗಳು ತಾಲೂಕು ಹಂತದಲ್ಲಿ ಹಮ್ಮಿಕೊಳ್ಳುವ ಒಂದು ದಿನದ ನಲಿಕಲಿ ಪುನಶ್ಚೇತನ ಕಾರ್ಯಗಾರದ ಪೂರ್ವಸಿದ್ಧತೆಯನ್ನು ರೂಪಿಸಿಕೊಂಡು ಕಾರ್ಯಗಾರವನ್ನು ಮುಕ್ತಾಯ ಮಾಡಲಾಯಿತು

No comments:

Post a Comment