Thursday, July 6, 2023

ನಲಿಕಲಿ ಸಮಾಲೋಚನೆ ಸಭೆ ಚೈತನ್ಯ ಪಬ್ಲಿಕ್ ಸ್ಕೂಲ್ ಮುಧೋಳ.






 


























































ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ಇಂದು ಚೈತನ್ಯ ಪಬ್ಲಿಕ್ ಸ್ಕೂಲ್, ಮುಧೋಳದಲ್ಲಿ ಮದನಾ, ಮುಧೋಳ, ಲಿಂಗಂಪಲ್ಲಿ, ರಿಬ್ಬನಪಲ್ಲಿ, ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗಾಗಿ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಮಾಲೋಚನೆ ಸಭೆಯಲ್ಲಿ ನಲಿಕಲಿ ನೋಡಲ್ ಅಧಿಕಾರಿಗಳಾದ ಶ್ರೀ ಧರ್ಮಪಾಲ ಸರ್ ರವರು ಹಾಗೂ ಸಿ ಆರ್ ಪಿ ಗಳಾದ ಶ್ರೀ ದೇವೇಂದ್ರಪ್ಪ ಯಾದವ್ ಶ್ರೀ ವೀರಣ್ಣಗೌಡ ಪಾಟೀಲ್ ಶ್ರೀ ಸಾಯಿಬಣ್ಣ ಪೂಜಾರಿ ಶ್ರೀ ಶರಣು ಪರಮಾ ಶಾಲೆಯ ಮುಖ್ಯ ಗುರುಗಳಾದ ಶ್ರೀ ಬಸಪ್ಪ ಪರಮಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಗಳು ಹಾಗೂ ನಲಿಕಲಿ ಸುಗಮಕಾರರಾದ ಶ್ರೀನಿವಾಸ್ ಮ್ಯಾಕಲ್, ಅಜೀಮ ಪ್ರೇಮಜಿ ಫೌಂಡೇಶನ್ ನ ಸಂಯೋಜಕರಾದ ಶ್ರೀ ಶರಣ ಕುಮಾರ ಸಲಾಗಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ, ಶ್ರೀಮತಿ ರತ್ನಬಾಯಿ, ಶ್ರೀಮತಿ ಆಶಾ ಎಮ್, ಉಪಸ್ಥಿತರಿದ್ದರು.

4 ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರು ಹಾಗೂ ಅತಿಥಿ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.

ಮೊದಲನೆಯ ಅವಧಿ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಪ್ರತಿ ಸುಗಮಕಾರರಿಂದ ವಿದ್ಯಾ ಪ್ರವೇಶ ಮತ್ತು ಸೇತುಬಂಧ ಕಾರ್ಯಕ್ರಮದ ಕುರಿತು ಹಿಮ್ಮಾಯಿತಿ ಪಡೆದುಕೊಳ್ಳಲಾಯಿತು ಉತ್ತಮವಾಗಿ ವಿದ್ಯಾ ಪ್ರವೇಶ ಮತ್ತು ಸೇತುಬಂಧ ಅನುಷ್ಠಾನ ಮಾಡಿರುವ ಸುಗಮಕಾರರಿಂದ ಯಶೋಗಾಥೆ ಹೇಳಿಸಲಾಯಿತು
ಎರಡನೆಯ ಅವಧಿ 11 ಗಂಟೆಯಿಂದ 12:30 ರ ವರೆಗೆ ಜುಲೈ ತಿಂಗಳಿನ ವಿದ್ಯಾ ಪ್ರವೇಶ ಸೇತುಬಂಧ ಮತ್ತು ನಿರಂತರ ಕಲಿಕೆಯ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು ಜುಲೈ ತಿಂಗಳಿನ ಭಾಷೆ ವಿಷಯದ ಕಲಿಕಾ ಏಣಿಯ ಪರಿಚಯದ ಜೊತೆಗೆ ಚಟುವಟಿಕೆಗಳ ನಿರ್ವಹಣೆ ಕುರಿತು ಚರ್ಚಿಸಲಾಯಿತು.
ಮೂರನೇ ಅವಧಿ 12:30 ರಿಂದ 2 ಗಂಟೆ ವರೆಗೆ ಗಣಿತ ವಿಷಯದ ಜುಲೈ ತಿಂಗಳಿನ ಸೇತುಬಂಧದ ಜೊತೆಗೆ ಮೈಲುಗಲ್ಲುಗಳ ಕುರಿತು ಕಲಿಕಾ ಏಣಿಗೆ ಅನುಗುಣವಾಗಿ ನಿರ್ವಹಿಸಬೇಕಾಗಿರುವ ಚಟುವಟಿಕೆಗಳ ಕುರಿತು ಸುಗಮಕಾರರಿಗೆ ಗುಂಪುವಾರು ಚಟುವಟಿಕೆಗಳನ್ನು ನೀಡಿ ವಿಷಯ ಮಂಡನೆ ಮಾಡಿಸಲಾಯಿತು.
ನಾಲ್ಕನೆಯ ಅವಧಿ 2:40 ರಿಂದ 3:45 ರ ವರೆಗೆ ವಿದ್ಯಾ ಪ್ರವೇಶದಲ್ಲಿ ಜುಲೈ ತಿಂಗಳಲ್ಲಿ ನಿರ್ವಹಿಸಬೇಕಾಗಿರುವ ಇಂಗ್ಲೀಷ್ ವಿಷಯದ ಚಟುವಟಿಕೆಗಳು ಹಾಗೂ ಸೇತುಬಂಧದ ಚಟುವಟಿಕೆಗಳ ಕಾರ್ಡುಗಳನ್ನು ಸುಗಮಕಾರರಿಗೆ ಗುಂಪುವಾರು ನೀಡಿ ಕಾರ್ಡುಗಳಲ್ಲಿರುವ ಚಟುವಟಿಕೆಗಳನ್ನು ಕಾರ್ಡಿನಲ್ಲಿರುವ ಸೂಚನೆಗಳಿಗೆ ಅನುಗುಣವಾಗಿ ಪ್ರತಿ ಗುಂಪಿನಿಂದ ಚಟುವಟಿಕೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡಲಾಯಿತು.
ಐದನೆಯ ಅವಧಿ 4 ಗಂಟೆಯಿಂದ 5:15ರ ವರೆಗೆ ಪರಿಸರ ಅಧ್ಯಯನದ ಜುಲೈ ತಿಂಗಳಿನ ಸೇತುಬಂಧ ಚಟುವಟಿಕೆಗಳ ಜೊತೆಗೆ ಕಲಿಕಾ ಏಣಿಯ ಪ್ರಕಾರ ನಿರ್ವಹಿಸಬೇಕಾಗಿರುವ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು ಹಾಗೂ ವಿವಿಧ ಪ್ರಯೋಗಗಳು ಕ್ರಾಫ್ಟ್ ಚಟುವಟಿಕೆಗಳನ್ನು ಗುಂಪುವಾರು ನೀಡಿ ಪ್ರತಿ ಗುಂಪುಗಳಿಂದ ಮಾಡಿಸಲಾಯಿತು.

ಕೊನೆಯ ಅವಧಿ 5:15 ರಿಂದ 5:35ರ ವರೆಗೆ ಜುಲೈ ತಿಂಗಳಲ್ಲಿ ಬರುವ ರೂಪಣಾತ್ಮಕ ಮೌಲ್ಯಮಾಪನ ೧ ರ ಕುರಿತು ಹಾಗೂ ಪ್ರತಿದಿನ ನಿರ್ವಹಿಸುವ ಚಟುವಟಿಕೆಗಳನ್ನು ಕಡ್ಡಾಯವಾಗಿ ಪ್ರಗತಿ ನೋಟ ಮತ್ತು ಶಿಕ್ಷಕರ ದಿನಚರಿಯಲ್ಲಿ ನಮೂದು ಮಾಡಲು ತಿಳಿಸಲಾಯಿತು.
ಒಟ್ಟಾರೆಯಾಗಿ ಇಂದಿನ ನಲಿಕಲಿ ಸಮಾಲೋಚನೆ ಸಭೆ ಎಲ್ಲಾ ಅನುಷ್ಠಾನ ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ರವರ ಸಹಕಾರದಿಂದ ಶಾಲೆಯ ಮುಖ್ಯ ಗುರುಗಳ ಸಹಕಾರದಿಂದ ಉತ್ತಮವಾಗಿ ಮೂಡಿ ಬಂದಿತು ಇಂದಿನ ಎಲ್ಲಾ ಅವಧಿಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಅದ್ಭುತವಾಗಿತ್ತು.
💐💐🙏🙏🙏

2 comments: