Friday, September 22, 2023

3ನೇ ನಲಿಕಲಿ ಸಮಾಲೋಚನೆ ಸಭೆ TLC ಮುಧೋಳ


















































































ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಮ್ ಪ್ರೇಮ ಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ
 ಇಂದು ಮುಧೋಳದ TLC ಯಲ್ಲಿ ಲಿಂಗಂಪಲ್ಲಿ ರಿಬ್ಬನಪಲ್ಲಿ ಮುಧೋಳ, ಮದನಾ, ಕಾನಾಗಡ್ಡ, ಮೋತಕಪಲ್ಲಿ, ಕೋಲಕುಂದಾ, ಕ್ಲಸ್ಟರ್ ಗಳ  ನಲಿಕಲಿ ಸುಗಮಕಾರರಿಗಾಗಿ 3ನೆಯ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು.7 ಕ್ಲಸ್ಟರ್ ಗಳಿಂದ ಸುಮಾರು 85 ಜನ ಸುಗಮಕಾರರು ಭಾಗವಹಿಸಿದ್ದರು
. ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಬರುವಂತಹ ಕನ್ನಡ ,ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನದ ಹಲವಾರು ಚಟುವಟಿಕೆಗಳನ್ನು ಸುಗಮಕಾರರಿಗೆ ಗುಂಪುಗಳನ್ನು ಮಾಡಿ ಚಟುವಟಿಕೆಗಳನ್ನು ಮಂಡನೆ ಮಾಡಿಸಲಾಯಿತು. ರೂಪಣಾತ್ಮಕ ಮೌಲ್ಯಮಾಪನ 2 ಸಂಕಲನಾತ್ಮಕ ಮೌಲ್ಯಮಾಪನ 1 ಹಾಗೂ ನಲಿಕಲಿಯಲ್ಲಿ ನಿರ್ವಹಿಸಬೇಕಾದ ದಾಖಲೆಗಳ ಕುರಿತು ಸುಗಮಕಾರರೊಂದಿಗೆ ಚರ್ಚಿಸಲಾಯಿತು. ಇಂದಿನ ಸಮಾಲೂಚನೆ ಸಭೆಯಲ್ಲಿ ಎಲ್ಲಾ ಸುಗಮಕಾರರ ಭಾಗವಹಿಸುವಿಕೆ ತುಂಬಾ ಉತ್ತಮವಾಗಿತ್ತು.

ನಲಿಕಲಿ ನೋಡಲ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳು 7 ಕ್ಲಸ್ಟರ್ ಗಳ ಸಿ ಆರ್ ಪಿ ಗಳು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಯೋಜಕರು ಉಪಸ್ಥಿತರಿದ್ದರು.


No comments:

Post a Comment