ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಂ ಪ್ರೇಮಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ದಿನಾಂಕ 09-09-2023 ಮತ್ತು 10-09-2023 ರಂದು
ನಲಿಕಲಿ ತರಗತಿ ನಿರ್ವಹಣೆ ಮಾಡುವ ಅತಿಥಿ ಸುಗಮಕಾರರಿಗಾಗಿ ಸೇಡಂ BRC ಕೇಂದ್ರದಲ್ಲಿ ಎರಡು ದಿನಗಳ ನಲಿಕಲಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ ಡಯಟ್ ಕಮಲಾಪುರದ ಉಪನ್ಯಾಸಕರಾದ ಶ್ರೀ ಅಂಬರೀಶ್ ಕಾಂಬಳೆ ಸರ್ ಹಾಗೂ ಶ್ರೀಯೂಸುಫ್ ಪಟೇಲ್ ಸರ್ ಭಾಗವಹಿಸಿ ಮಾರ್ಗದರ್ಶನ ಮಾಡಿದರು ನಲಿಕಲಿ ನೋಡಲ್ ಅಧಿಕಾರಿಗಳಾದ ಶ್ರೀ ಧರ್ಮಪಾಲ ಸರ್ ಬಿ, ಆರ್, ಪಿ, ಶ್ರೀ ಶಿವಕುಮಾರ್ ಬಟಗೇರ ರವರು ಉಪಸ್ಥಿತರಿದ್ದರು ಅಜೀಮ ಪ್ರೇಮಜಿ ಫೌಂಡೇಶನ್ ನ ಸಂಯೋಜಕರಾದ ಶ್ರೀ ಗಂಗಾಧರ್ ಸ್ವಾಮಿ, ಶ್ರೀ ಶರಣ ಕುಮಾರ ಸಲಾಗಾರ ,ಪೃದ್ವಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಪದ್ಮಾವತಿ, ಶಿವಕುಮಾರ್ ಪಾಟೀಲ್ ಶ್ರೀಮತಿ ಅಂಬಿಕಾ, ಕರಿಗೂಳಿ ದುಗನೂರ ಭಾಗವಹಿಸಿದ್ದರು.
ಒಟ್ಟು 80 ಜನ ಸುಗಮಕಾರರು ಭಾಗವಹಿಸಿದ್ದರು.
ಎರಡು ದಿನಗಳ ಕಾರ್ಯಗಾರದಲ್ಲಿ ಮೊದಲನೆಯ ದಿನ ಕಾರ್ಯಗಾರದ ಉದ್ದೇಶಗಳು ಹಾಗೂ ಶಿಕ್ಷಣದ ಗುರಿಗಳು,NIPUN BHARAT,FLN, ನಲಿಕಲಿಯ ಹಿನ್ನೆಲೆ ನಲಿಕಲಿಯಲ್ಲಿ ಬಳಕೆಯಾಗಿರುವ ವಿಶೇಷ ಪದಗಳು, ನಲಿಕಲಿಯಲ್ಲಿ ಭಾಷೆಯ ಕಲಿಕೆ ಕುರಿತು ವಿವಿಧ ಚಟುವಟಿಕೆಗಳ ಮೂಲಕ PPT ಗಳ ಮೂಲಕ ವಿಷಯವನ್ನು ಮಂಡನೆ ಮಾಡಲಾಯಿತು ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು.
ಎರಡನೆಯ ದಿನದ ಕಾರ್ಯಗಾರದಲ್ಲಿ ನಲಿಕಲಿಯಲ್ಲಿ ENK,ಗಣಿತ ಮತ್ತು ಪರಿಸರ ಅಧ್ಯಯನದ ಕಲಿಕೆ,ಕುರಿತು ಮಾಹೆವಾರು ಹಂಚಿಕೆ, ಕಲಿಕಾ ಏಣಿ,ಕಾರ್ಡುಗಳು,ಪ್ರಗತಿ ನೋಟ, ಗುಂಪುತಟ್ಟೆ ಗಳ ಮೂಲಕ ವಿಷಯ ಮಂಡನೆ ಮಾಡಲಾಯಿತು.
ಕೊನೆಯ ಅವಧಿಯಲ್ಲಿ ನಲಿಕಲಿಯಲ್ಲಿ ಮೌಲ್ಯಮಾಪನ ಹಾಗೂ ದಾಖಲೆಗಳ ನಿರ್ವಹಣೆ ಕುರಿತು ರೂಪಣಾತ್ಮಕ ಮೌಲ್ಯಮಾಪನ 2 ರ ನಿರ್ವಹಣೆ ಕುರಿತು ಸುಗಮಕಾರರ ಪ್ರಶ್ನೆಗಳಿಗೆ ಉತ್ತರಿಸುವುದರ ಜೊತೆಗೆ ದಿನಚರಿಯಲ್ಲಿ ಪ್ರತಿದಿನ ನಿರ್ವಹಿಸುವ ಚಟುವಟಿಕೆಗಳನ್ನು ನಮೂದು ಮಾಡಲು ಸುಗಮಕಾರರಿಗೆ ತಿಳಿಸಲಾಯಿತು. ಪ್ರಗತಿ ನೋಟ, ಶಿಕ್ಷಕರ ವೈಯಕ್ತಿಕ ಅಂಕವಹಿ, ಹಾಗೂ ಕ್ರೂಡಿಕೃತವಹಿಗಳನ್ನು ಪರಿಚಯಿಸಲಾಯಿತು.
ಸುಗಮಕಾರರಿಗೆ Kahoot ಗೇಮ್ ಆಡಿಸುವ ಮೂಲಕ ಹಿಮ್ಮಾಯಿತಿ ಪಡೆದುಕೊಳ್ಳಲಾಯಿತು.
ಕೊನೆಗೆ ಸಮಾರೋಪ ಸಮಾರಂಭದಲ್ಲಿ NGO ಸದಸ್ಯರಾದ ಶ್ರೀ ವಿಠ್ಠಲ್ ರಾಥೋಡ್ ಸರ್ ಭಾಗವಹಿಸಿದ್ದರು ಸುಗಮಕಾರರು ಎರಡು ದಿನಗಳ ನಲಿಕಲಿ ಕಾರ್ಯಗಾರದಲ್ಲಿ ಪಡೆದ ಜ್ಞಾನವನ್ನು ತರಗತಿ ಕೋಣೆಗಳಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂಬ ಭರವಸೆಯನ್ನು ನೀಡಿದರು ಎರಡು ದಿನಗಳ ಕಾರ್ಯಗಾರದಲ್ಲಿ ಸುಗಮಕಾರರ ಭಾಗವಹಿಸುವಿಕೆ ಅದ್ಭುತವಾಗಿತ್ತು. ಅಜೀಮ ಪ್ರೇಮ ಜಿ ಫೌಂಡೇಶನ್ ವತಿಯಿಂದ ಎಲ್ಲಾ ಸುಗಮಕಾರರಿಗೆ ಮೂರು ತರಗತಿಗಳ ಮೂರು ವಿಷಯಗಳ ಕಲಿಕಾ ಏಣಿಗಳನ್ನು ನೀಡಲಾಯಿತು.
ಒಟ್ಟಾರೆಯಾಗಿ ಎರಡು ದಿನಗಳ ನಲಿಕಲಿ ಕಾರ್ಯಗಾರ ಎಲ್ಲಾ ಅನುಷ್ಠಾನ ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದಿಂದ ಅಜೀಂ ಪ್ರೇಮ್ ಜಿ ಫೌಂಡೇಶನ್ ರವರ ಸಹಕಾರದಿಂದ ಉತ್ತಮವಾಗಿ ಮೂಡಿ ಬಂದಿತು.
💐💐🙏🙏🙏







































































No comments:
Post a Comment