Tuesday, October 3, 2023

3 ದಿನಗಳ ನಲಿಕಲಿ ಸನಿವಾಸ ಕಾರ್ಯಗಾರ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯ ಕಲಬುರಗಿ

 ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ಹಾಗೂ ಟಾಟಾ ಕಲಿಕಾ ಟ್ರಸ್ಟ್ ಯಾದಗಿರಿ ಇವರ ಸಹಯೋಗದಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಟಕಲ್ ಮತ್ತು ಯಾದಗಿರಿ ತಾಲೂಕುಗಳ CRP& BRP ಗಳಿಗೆ ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಕಲಬುರಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ದಿನಾಂಕ 28,29,30, ಸೆಪ್ಟಂಬರ್ 2023 ರಂದು ಮೂರು ದಿನಗಳ ನಲಿಕಲಿ ಸನಿವಾಸ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಬಸವರಾಜ್ ಶೆಟ್ಟಿ ಸರ್ ಕಾರ್ಯಗಾರದ ಉದ್ದೇಶಗಳನ್ನು ಕುರಿತು ಮಾತನಾಡಿದರು ಜಿಲ್ಲೆಯ ಉಪನಿರ್ದೇಶಕರಾದ ಶ್ರೀಯುತ ಮಂಜುನಾಥ್ ಸರ್ ರವರು ಕಾರ್ಯಗಾರದ ಉಪಯೋಗವನ್ನು ಸುಗಮಕಾರರು ಪಡೆದುಕೊಳ್ಳಲು ತಿಳಿಸಿದರು ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಪೂಜಾರಿ ಸರ್ ರವರು ಪ್ರತಿಯೊಬ್ಬರು ಕಾರ್ಯಗಾರದ ಅವಧಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಎಲ್ಲ ಶಿಬಿರಾರ್ಥಿಗಳಿಗೆ ಸೂಚಿಸಿದರು ಟಾಟಾ ಕಲಿಕಾ ಟ್ರಸ್ಟ್ ನ ಯಾದಗಿರಿ ಜಿಲ್ಲೆಯ ಮುಖ್ಯಸ್ಥರಾದ ನಿರ್ಮಲ ಮೇಡಂ ರವರು ಯಾದಗಿರಿ ಜಿಲ್ಲೆಯ ನಲಿಕಲಿ ಬಲವರ್ಧನೆಗಾಗಿ ಹಾಕಿಕೊಂಡಿರುವ ಯೋಜನೆ ಈ ಕಾರ್ಯದ ಗುರಿ ಮತ್ತು ಉದ್ದೇಶಗಳನ್ನು ಕುರಿತು ಮಾತನಾಡಿದರು.

ಕಲಬುರಗಿ ಜಿಲ್ಲೆಯ ಉಪನಿರ್ದೇಶಕರಾದ ಶ್ರೀಯುತ ಸಕ್ರಪ್ಪ ಗೌಡ ಬಿರಾದರ್ ಸರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಎಲ್ಲರಿಗೂ ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳುತ್ತಾ ಪ್ರತಿಯೊಬ್ಬ ಸುಗಮಕಾರರು ಮಕ್ಕಳ ಕಲಿಕೆಗೆ ಕೂಗು ಆಗಬೇಕು ಎಂಬ ಮಾತನ್ನು ಹೇಳಿದರು ಕಲಬುರಗಿಯ ಆಯುಕ್ತಾಲಯದ ವಿಷಯ ಪರಿವೀಕ್ಷಕರಾದ ಶ್ರೀಯುತ ನಾಗೇಂದ್ರಪ್ಪ ಅವರಾದಿ ಸರ್ ರವರು ಶೈಕ್ಷಣಿಕ ಪ್ರಗತಿಗೆ ಟಾಟಾ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಮತ್ತು ಈ ಕಾರ್ಯಗಾರದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂಬ ಮಾತುಗಳನ್ನು ನುಡಿದರು.

ಶ್ರೀಯುತ ಸಕ್ರಪ್ಪ ಗೌಡ ಬಿರಾದರ್ ಉಪನಿರ್ದೇಶಕರು ಮತ್ತು ಶ್ರೀಯುತ ನಾಗೇಂದ್ರಪ್ಪ ಅವರಾದಿ ಸರ್ ರವರು 28/09/2023 ರಂದು ಈದ್ ಮಿಲಾದ್ ಪ್ರಯುಕ್ತ ಸರಕಾರಿ ರಜೆ ಇದ್ದರೂ ಕೂಡ ಕಾರ್ಯಗಾರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಸಕ್ರಿಯವಾಗಿ ಭಾಗವಹಿಸಿ ನಲಿಕಲಿ ಕುರಿತು ತಿಳಿದುಕೊಳ್ಳಲು ಅವರಿಗೆ ಇರುವ ಆಸಕ್ತಿ ಮತ್ತು ಬದ್ಧತೆ ಎಲ್ಲರಿಗೂ ಪ್ರೇರಣದಾಯಕವಾಗಿತ್ತು.

ಮೊದಲನೇ ದಿನದ ಮೊದಲನೇ ಅವಧಿಯಲ್ಲಿ NEP -2020/ನಿಪುಣ ಭಾರತ್ ಪರಿಚಯ ಈ ಅವಧಿಯನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರವೀಂದ್ರ ಆರ್ ಡಿ ಸರ್ ರವರು ಉತ್ತಮವಾದ ಉದಾಹರಣೆಗಳ ಮೂಲಕ ವಿಷಯವನ್ನು ಮಂಡನೆ ಮಾಡಿದರು.

ಎರಡನೆಯ ಅವಧಿಯಲ್ಲಿ ನಲಿಕಲಿ ಒಂದು ಪರಿಚಯ, ನಲಿಕಲಿ ಪರಿಷ್ಕರಣೆ, ಏನು? ಏಕೆ? ಹೇಗೆ? ಎಂಬ ವಿಷಯವನ್ನು ಶ್ರೀ ರವೀಂದ್ರ ಆರ್ ಡಿ ಸರ್ ರವರು ಎಲ್ಲರಿಗೂ ಮನಮುಟ್ಟುವಂತೆ ವಿಷಯವನ್ನು ಮಂಡನೆ ಮಾಡಿದರು.

ಮೂರನೆಯ ಅವಧಿಯಲ್ಲಿ ನಲಿಕಲಿಯಲ್ಲಿ ಭಾಷೆ ಕಲಿಕೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಿದ್ದು ಸರ್ ರವರು 1,2, 3,ನೇ ತರಗತಿಗಳಿಗೆ 2023/24 ಸಾಲಿನಲ್ಲಿ ನಿಗದಿಪಡಿಸಿರುವ ಕಲಿಕಾಂಶಗಳ ಪರಿಚಯವನ್ನು ಮಾಡುತ್ತಾ ಭಾಷೆ ವಿಷಯದ ಲೋಗೋಗಳು ಗುಂಪು ತಟ್ಟೆಗಳು ಕಾರ್ಡುಗಳನ್ನು ಸುಗಮಕಾರರನ್ನು ಗುಂಪುಗಳನ್ನಾಗಿ ವಿಂಗಡಿಸಿ ವಿಷಯ ಮಂಡನೆ ಸುಗಮಕಾರರಿಂದ ಮಾಡಿಸಿದರು.

ಮೊದಲನೇ ದಿನದ ಅವಧಿಗಳ ಚಟುವಟಿಕೆ, ಚರ್ಚೆಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು.

ಸಂಜೆ 7 ಗಂಟೆಯಿಂದ ಎಂಟು ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅನೇಕ ಶಿಬಿರಾರ್ಥಿಗಳು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು.

ಎರಡನೆಯ ದಿನದ ಕಾರ್ಯಗಾರಕ್ಕೆ ಕಲಬುರಗಿ ಉಪನಿರ್ದೇಶಕರಾದ ಶ್ರೀ ಸಕ್ರಪ್ಪ ಗೌಡ ಬಿರಾದರ್ ಸರ್ ಮತ್ತು ನಾಗೇಂದ್ರಪ್ಪ ಅವರಾದಿ ಬೆಳಿಗ್ಗೆ 8:30ಕ್ಕೆಆಗಮಿಸಿ ಸಮಯ ಪಾಲನೆ ಸಮಯದ ಸದುಪಯೋಗದ ಕುರಿತು ನಮಗೆಲ್ಲ ಮಾದರಿಯಾದರೂ. ಕಾರ್ಯಗಾರದಲ್ಲಿ ಟಾಟಾ ಕಲಿಕಾ ಟ್ರಸ್ಟ್ ರವರು ನಲಿ ಕಲಿ ತರಗತಿಗಳ ಬಲವರ್ಧನೆಗೆ ಹಮ್ಮಿಕೊಂಡಿರುವ ಕಾರ್ಯ ಯೋಜನೆಗಳ ಕುರಿತು ಲಿಂಗಪ್ಪ ಸರ್ PPT ಗಳ ಮೂಲಕ ತಿಳಿಸಿದರು.

ಈ ಕಾರ್ಯಗಾರಕ್ಕೆ ಕಲಬುರಗಿಯ ಆಯುಕ್ತಾಲಯದ ಮಾನ್ಯ ಅಪರ ಆಯುಕ್ತರಾದ ಶ್ರೀಯುತ

 ಡಾ:ಆಕಾಶ್ ಸರ್ ರವರು ಭೇಟಿ ನೀಡಿ ಕಾರ್ಯಗಾರದ ವೇಳಾಪಟ್ಟಿಯಂತೆ ಮೊದಲ ದಿನದ ಅವಧಿವಾರು ಈ ಹಿಮ್ಮಾಹಿತಿಯನ್ನು ಸುಗಮಕಾರರಿಂದ ಪಡೆದುಕೊಂಡರು ಎಲ್ಲರಿಗೂ ಮಾರ್ಗದರ್ಶನ ನುಡಿಗಳನ್ನು ನುಡಿದರು ಮಾನ್ಯ ಆಯುಕ್ತರ ನಡೆ ನುಡಿ ಸರಳತೆ ಎಲ್ಲರಿಗೂ ಮೂಕ ಪ್ರೇಕ್ಷಕರನ್ನಾಗಿ ಮಾಡಿತು. ಮೊದಲನೆಯ ಅವಧಿಯಲ್ಲಿ ಅಜೀಮ ಪ್ರೇಮಜಿ ವಿಶ್ವವಿದ್ಯಾಲಯದ ಶ್ರೀಯುತ ಶರದ್ ಸುರೆ ಸರ್ Online ನಲ್ಲಿ ನಲಿ-ಕಲಿಯಲ್ಲಿ ಕ್ರಿಯಾ ಸಂಶೋಧನೆ ಎಂಬ ವಿಷಯವನ್ನು ಅದ್ಭುತವಾಗಿ ಮಂಡನೆ ಮಾಡಿದರು ಈ ವಿಷಯದ ಕುರಿತು ರವೀಂದ್ರ ಆರ್ ಡಿ ಸರ್ ರವರು ತಮ್ಮ PPT ಮೂಲಕ ಶಿಬಿರಾರ್ಥಿಗಳೊಂದಿಗೆ ಚರ್ಚಿಸಿದರು.

ಎರಡನೆಯ ಅವಧಿಯಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಕರಿ ಗೂಳಿ ದುಗನೂರು ರವರು ನಲಿಕಲಿಯಲ್ಲಿ ಗಣಿತ ವಿಷಯದ ಕುರಿತು ಸುಗಮಕಾರರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾ 1, 2, 3, ತರಗತಿಗಳಿಗೆ ಪ್ರಸ್ತುತ ಈ ವರ್ಷದಲ್ಲಿ ಅಳವಡಿಸಿಕೊಂಡಿರುವ ಪರಿಕಲ್ಪನೆಗಳನ್ನು ಕುರಿತು ವಿಷಯವನ್ನು ಮಂಡನೆ ಮಾಡಿದರು ಹಾಗೂ ಮೂರು ತರಗತಿಗಳ ಸೆಪ್ಟೆಂಬರ್ ತಿಂಗಳಿನ ಗುರಿಗಳಿಗೆ ಅನುಗುಣವಾಗಿ ಕಲಿಕಾ ಏಣಿಗೆ ಅನುಗುಣವಾಗಿ ಒಂದೊಂದು ಮೈಲುಗಲ್ಲುಗಳನ್ನು ಕಾರ್ಡು ಮತ್ತು ಅಭ್ಯಾಸ ಪುಸ್ತಕದ ಕ್ರಮಬದ್ಧವಾದ ಜೋಡಣೆಯ ಮೂಲಕ ವಿಷಯವನ್ನು ಮಂಡನೆ ಮಾಡಿದರು.

ಮೂರನೇ ಅವಧಿಯಲ್ಲಿ ನಲಿ-ಕಲಿಯಲ್ಲಿ ಆರೋಗ್ಯ ಮತ್ತು ಪರಿಸರ ಅಧ್ಯಯನದ ಕಲಿಕೆ ಕುರಿತು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಚಂದ್ರಕಲಾ ಗೂಗಲ್ ಮೇಡಂ ರವರು ಪರಿಸರ ಅಧ್ಯಯನದ ಲೋಗೋಗಳು ಕಲಿಕಾ ಏಣಿ ಈ ವರ್ಷದಲ್ಲಿ ಬಳಸುತ್ತಿರುವ ಪರಿಸರ ಅಧ್ಯಯನದ ಕಾರ್ಡುಗಳು ಮತ್ತು ಅವುಗಳ ಜೋಡಣೆ ಕುರಿತು ಸುಗಮಕಾರರಿಗೆ ಕಾರ್ಡುಗಳನ್ನು ಕೊಡುವ ಮೂಲಕ ಪರಿಚಯಿಸಿದರು.

ನಾಲ್ಕನೆಯ ಅವಧಿಯಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅನಂತಸ್ವಾಮಿ ಸರ್ ರವರು ನಲಿ ಕಲಿಯಲ್ಲಿ ಮೌಲ್ಯಮಾಪನದ ಕುರಿತು ಸುಗಮಕಾರರಿಂದ ಮಾಹಿತಿ ಪಡೆಯುತ್ತಾ ಸಕ್ರಿಯವಾಗಿ ಚರ್ಚೆಯಲ್ಲಿ ಭಾಗವಹಿಸುವಂತೆ ಮಾಡಿ ವಿಷಯ ಮಂಡನೆ ಮಾಡಿದರು.

ಎರಡನೆಯ ದಿನದ ಕಾರ್ಯಗಾರದ ಅವಧಿಗಳ ಚಟುವಟಿಕೆಗಳಲ್ಲಿ ಚರ್ಚೆಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಅದ್ಭುತವಾಗಿತ್ತು.

ಸಂಜೆ 7:00 ಯಿಂದ 8:00 ವರೆಗೆ ಸಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಸುಗಮಕಾರರು ಮಿಮಿಕ್ರಿ ಏಕಪಾತ್ರ ಅಭಿನಯ ಕರೋಕೆ ಹಾಡುಗಳು ಜನಪದ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಮನಸೊರೆ ಗೊಳಿಸಿದರು.

ಮೂರನೇ ದಿನದ ಕಾರ್ಯಗಾರದ ಮೊದಲನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅನಂತಸ್ವಾಮಿ ಸರ್ ರವರು 

ನಲಿಕಲಿಯಲ್ಲಿ ನಿರ್ವಹಿಸ ಬೇಕಾಗಿರುವ ದಾಖಲೆಗಳ ಕುರಿತು ವಿಷಯವನ್ನು ಮಂಡನೆ ಮಾಡಿದರು.

ಎರಡನೆಯ ಅವಧಿಯಲ್ಲಿ ಶಾಲೆ ಮತ್ತು ತಂತ್ರಜ್ಞಾನ ಎಂಬ ವಿಷಯವನ್ನು ಟಾಟಾ ಟ್ರಸ್ಟ್ ಸಂಯೋಜಕರಾದ ಶ್ರೀ ಮಹೇಶ್ ಸರ್ ಅವರು ತುಂಬಾ ಉಪಯುಕ್ತವಾದ ವಿಷಯಗಳನ್ನು ಒಂದೊಂದು ತಂಡಕ್ಕೆ ಲ್ಯಾಪ್ ಟ್ಯಾಪ್ ಕೊಡುವ ಮೂಲಕ ಪ್ರಾಯೋಗಿಕವಾಗಿ ಸುಗಮಕಾರರಿಗೆ ಅನೇಕ ಹೊಸ ವಿಷಯಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು.

ಈ ಅವಧಿಯ ನಂತರ ಎಲ್ಲಾ ಸುಗಮಕಾರರು ಊಟವನ್ನು ಸವಿದ ನಂತರ ನಲಿಕಲಿ ಪ್ರಾಯೋಗಿಕ ತರಗತಿಯನ್ನು ವೀಕ್ಷಿಸಲು ಭಂಕೂರ ಶಾಲೆಗೆ ತೆರಳಲು ಸಿದ್ದರಾದರು.

ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರವೀಂದ್ರ ಆರ್ ಡಿ ಸರ್ ರವರು ನಲಿ-ಕಲಿ ಪ್ರಾಯೋಗಿಕ ತರಗತಿ ವೀಕ್ಷಿಸುವ ಮುನ್ನ ಗಮನಿಸಬೇಕಾದ ಅಂಶಗಳ ಕುರಿತು ಸುಗಮಕಾರರಿಗೆ ತಿಳಿಸಿದರು.

ಒಟ್ಟಾರೆಯಾಗಿ ಮೂರು ದಿನಗಳ ನಲಿಕಲಿ ಸನಿವಾಸ ಕಾರ್ಯಗಾರ ಉತ್ತಮವಾಗಿ ನಡೆಯಿತು.




































































































































No comments:

Post a Comment