ಸೇಡಂ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋನಾಪುರ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುನಕನಪಲ್ಲಿ ಈ ಎರಡು ಗ್ರಾಮಗಳಲ್ಲಿ ಶಿಕ್ಷಕರ ವರ್ಗಾವಣೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕ ಶಿಕ್ಷಕಿಯರಿಗೆ ಅದ್ದೂರಿಯಾಗಿ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಹಾಗೂ ಸತ್ಕರಿಸುವ ಮೂಲಕ ಅದ್ದೂರಿಯಾಗಿ ಬಿಳ್ಕೊಡುಗೆ ಸಮಾರಂಭವನ್ನು ಮಾಡಿದರು ಉತ್ತಮವಾಗಿ ಕಾರ್ಯನಿರ್ವಹಿಸುವವರಿಗೆ ಇವತ್ತಿಗೂ ಕೂಡ ಸಮಾಜದಲ್ಲಿ ಉತ್ತಮವಾದ ಬೆಲೆ ಇದೆ ಎಂಬುದಕ್ಕೆ ಈ ಎರಡು ಗ್ರಾಮಗಳಲ್ಲಿ ನಡೆದಂತಹ ಬಿಳ್ಕೊಡುಗೆ ಸಮಾರಂಭವೇ ಸಾಕ್ಷಿಯಾಗಿತ್ತು ತಮ್ಮ ನೆಚ್ಚಿನ ಶಿಕ್ಷಕ ಶಿಕ್ಷಕಿಯರು ತಮ್ಮ ಶಾಲೆಯನ್ನು ಬಿಟ್ಟು ಹೋಗುವುದನ್ನು ಕಂಡು ಎಲ್ಲಾ ಮಕ್ಕಳು ಪೋಷಕರು ಗ್ರಾಮದ ಹಿರಿಯರು ಕಣ್ಣೀರು ಸುರಿಸಿದರು ಮಕ್ಕಳ ಗ್ರಾಮಸ್ಥರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಗ್ರಾಮಸ್ಥರ ಮಕ್ಕಳ ಮನಸ್ಸನ್ನು ಗೆದ್ದಿರುವ ಎಲ್ಲ ಗೌರವಾನ್ವಿತರಿಗೆ ಅಭಿನಂದನೆಗಳು.
ಸುಮಾರು 10 ವರ್ಷಗಳಿಗಿಂತಲೂ ಹೆಚ್ಚು ನಮ್ಮ ಸೇಡಂ ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸೇಡಂ ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿರುವ ಹಾಗೂ ವಿಶೇಷವಾಗಿ ನಲಿಕಲಿ ಸುಗಮಕಾರರಾಗಿ ಕರ್ತವ್ಯ ನಿರ್ವಹಿಸಿ ನಲಿಕಲಿ ಕಾರ್ಯಗಾರ, ಸಮಾಲೋಚನೆ ಸಭೆ, ನಲಿಕಲಿ ಮೇಳಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸೇಡಂ ತಾಲೂಕಿನಲ್ಲಿ ನಲಿಕಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಲು ಶ್ರಮಿಸಿ ನಲಿಕಲಿ ಅನುಷ್ಠಾನದಲ್ಲಿ ನಮ್ಮ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿ ಮಕ್ಕಳ ಗುಣಾತ್ಮಕ ಶಿಕ್ಷಣ ನೀಡಲು ಶ್ರಮಿಸಿರುವ ಗೌರವಾನ್ವಿತ ನಲಿಕಲಿ ಸುಗಮಕಾರರಿಗೆ ಸೇಡಂ ನಲಿಕಲಿ ಬಳಗದ ಪರವಾಗಿ ಅಭಿನಂದನೆಗಳು.ನಾನು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲು ತಾವೆಲ್ಲರೂ ತುಂಬಾ ಸಹಕಾರ ನೀಡಿದ್ದೀರಿ ನಾನು ಕೂಡ ತಮ್ಮನ್ನು ಭಾರವಾದ ಮನಸ್ಸಿನಿಂದ ಬೀಳ್ಕೊಡುತ್ತಿದ್ದೇನೆ. ನಮ್ಮ ತಾಲೂಕಿನಲ್ಲಿ ನಿಮ್ಮೆಲ್ಲರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.
ನಮ್ಮ ತಾಲೂಕಿನಿಂದ ತಮ್ಮ ಸ್ವಂತ ತಾಲೂಕು ಜಿಲ್ಲೆಗಳಿಗೆ ವರ್ಗಾವಣೆ ಹೊಂದಿರುವ ತಮ್ಮೆಲ್ಲರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಭಗವಂತ ತಮಗೂ ತಮ್ಮ ಕುಟುಂಬಸ್ಥರಿಗೂ ಸುಖ ಶಾಂತಿ ಆಯುರಾರೋಗ್ಯ ಕೊಟ್ಟು ಕಾಪಾಡಲಿ ತಾವು ನಮ್ಮ ಸೇಡಂನಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯ ತಮ್ಮ ನಲಿಕಲಿ ತರಗತಿಗಳ ಅನುಭವ ಜ್ಞಾನ ತಮ್ಮ ತಾಲೂಕು ಜಿಲ್ಲೆಗಳ ಮಕ್ಕಳಿಗೂ ಸಿಗಲಿ ಎಲ್ಲರಿಗೂ ಶುಭವಾಗಲಿ.
💐💐🙏🙏


















































ತಮ್ಮ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು
ReplyDelete