ಇಂದು ಸೇಡಂ ತಾಲೂಕಿನ ಮುಧೋಳ TLC ಕೇಂದ್ರದಲ್ಲಿ ಲಿಂಗಂಪಲ್ಲಿ ,ರಿಬ್ಬನಪಲ್ಲಿ ,ಮುಧೋಳ, ಮದನಾ, ಕಾನಾಗಡ್ಡ, ಮೋತಕಪಲ್ಲಿ ,ಕೋಲಕುಂದಾ ಕ್ಲಸ್ಟರ್ ಗಳ ನಲಿಕಲಿ ಸುಗಮಕಾರರಿಗಾಗಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸೇಡಂ ರವರ ಸಹಯೋಗದಲ್ಲಿ ನಲಿಕಲಿ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮೊದಲನೆಯ ಅವಧಿಯಲ್ಲಿ ಸುಗಮಕಾರರಿಂದ ತರಗತಿ ಪ್ರಕ್ರಿಯೆಗಳ ಅನುಭವವನ್ನು ಪಡೆಯುತ್ತ ಹೊಸದಾಗಿ ನೇಮಕವಾಗಿರುವ ಅತಿಥಿ ಶಿಕ್ಷಕರ ಮಾಹಿತಿಗಾಗಿ ನಲಿಕಲಿ ಸಿದ್ದತೆ ಕುರಿತು ಹಾಗೂ ನಲಿಕಲಿಯ ಹಿನ್ನೆಲೆಯ ಕುರಿತು ಚರ್ಚಿಸಲಾಯಿತು.
ಎರಡನೇ ಅವಧಿಯಲ್ಲಿ ENK ವಿಷಯದ ನವೆಂಬರ್ ತಿಂಗಳಿನ ಕೊನೆಯ ಹಾಗೂ ಡಿಸೆಂಬರ್ ತಿಂಗಳಿನ ದಿನಾಂಕ 16 ರ ವರೆಗೆ ಬರುವ ಚಟುವಟಿಕೆಗಳನ್ನು ಸುಗಮಕಾರರನ್ನು ತೊಡಗಿಸಿಕೊಂಡು ಕಲಿಕಾ ಸಾಮಗ್ರಿಗಳು ಮತ್ತು ಕಾರ್ಡುಗಳನ್ನು ಬಳಸಿಕೊಂಡು ಚಟುವಟಿಕೆಗಳನ್ನು ಮಾಡಿಸಲಾಯಿತು.
ಮೂರನೆಯ ಅವಧಿಯಲ್ಲಿ
ಶಿಕ್ಷಕರನ್ನು ಬಳಸಿಕೊಂಡು ಭಾಷೆ ವಿಷಯದ ತರಗತಿ ನಿರ್ವಹಣೆ ಮಾಡಲಾಯಿತು. ಸುಗಮಕಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ ತರಗತಿ ನಿರ್ವಹಣೆ ಕುರಿತು ಚರ್ಚೆ ಮಾಡಲಾಯಿತು ಪ್ರಗತಿ ನೋಟದಲ್ಲಿ ಮಕ್ಕಳ ಪ್ರಗತಿಯ ದಾಖಲೀಕರಣ ಹಾಗೂ ಶಿಕ್ಷಕರ ದಿನಚರಿಯಲ್ಲಿ ದಾಖಲೀಕರಣದ ಕುರಿತು ಪ್ರಾಯೋಗಿಕವಾಗಿ ತೋರಿಸಲಾಯಿತು
ನಾಲ್ಕನೆಯ ಅವಧಿಯಲ್ಲಿ ನಲಿಕಲಿಯಲ್ಲಿ ಗಣಿತ ಕಲಿಕೆಗೆ ಸಂಬಂಧಿಸಿದಂತೆ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಸುಗಮಕಾರರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿ ಹಲವಾರು ಚಟುವಟಿಕೆಗಳನ್ನು ಮಾಡಿಸಲಾಯಿತು.
ಐದನೆಯ ಅವಧಿಯಲ್ಲಿ ನವೆಂಬರ್ ತಿಂಗಳಿನ ಕೊನೆಯಲ್ಲಿ ಬರುವ ಮತ್ತು ಡಿಸೆಂಬರ್ ತಿಂಗಳಿನ ಎರಡನೇ ವಾರಕ್ಕೆ ಸಂಬಂಧಿಸಿದಂತೆ ಪರಿಸರ ಅಧ್ಯಯನದ ಚಟುವಟಿಕೆಗಳ ಪರಿಚಯದ ಜೊತೆಗೆ ಆಹಾರಧಾನ್ಯಗಳ ಯೋಜನೆ ಧಾನ್ಯಗಳು ಹಾಗೂ ಬೆಳೆಕಾಳುಗಳ ಯೋಜನೆಯನ್ನು ಮಾಡಿಸಲಾಯಿತು ಹಾಗೂ ಅದಲು ಬದಲು ಪ್ರಯೋಗವನ್ನು ಮಾಡಿಸಲಾಯಿತು
ಒಟ್ಟಾರೆಯಾಗಿ ಇಂದಿನ ಸಮಾಲೋಚನೆ ಸಭೆ ಅದ್ಭುತವಾಗಿ ಮೂಡಿ ಬಂದಿತ್ತು ಪ್ರತಿ ಅವಧಿಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ತುಂಬಾ ಚೆನ್ನಾಗಿತ್ತು ಇಂದಿನ ಸಮಾಲೋಚನೆ ಸಭೆಯಲ್ಲಿ BRP ಶ್ರೀ ಉಮಾಕಾಂತ ಸರ್ CRP ಗಳಾದ
ಶ್ರೀ ದೇವೇಂದ್ರಪ್ಪ ಯಾದವ್ ,ಶ್ರೀ ವೀರನಗೌಡ, ಶ್ರೀ ಶರಣು ಪರಮಾ ,ಶ್ರೀ ಸಾಯಿಬಣ್ಣ ಪೂಜಾರಿ ,ಶ್ರೀ ಅಶೋಕ ರೆಡ್ಡಿ,
ಶ್ರೀ ನರಸಪ್ಪ ಪೂಜಾರಿ, ಶ್ರೀ ಕಾಸಪ್ಪ ಹಡಗಲಿ ,ಅಜೀಮ್ ಪ್ರೇಮಜಿ ಫೌಂಡೇಶನ್ ಶ್ರೀ ಶರಣು ಸಲಗಾರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲ , ಶ್ರೀಮತಿ ರತ್ನಬಾಯಿ,ಶ್ರೀಮತಿ ಚಂದ್ರಕಲಾ, ಶ್ರೀಮತಿ ಸುನಿತಾಬಾಯಿ, ಕರಿಗೂಳಿ ದುಗನೂರ
ಉಪಸ್ಥಿತರಿದ್ದರು.














































































No comments:
Post a Comment