ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ಇಂದು TLC ಮುಧೋಳದಲ್ಲಿ ಮದನಾ, ಲಿಂಗಂಪಲ್ಲಿ, ರಿಬ್ಬನಪಲ್ಲಿ, ಮುಧೋಳ, ಕ್ಲಸ್ಟರಗಳ ನಲಿಕಲಿ ಸುಗಮಕಾರರಿಗಾಗಿ ನಲಿಕಲಿ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕನ್ನಡ, ಇಂಗ್ಲಿಷ್,ಗಣಿತ, ಪರಿಸರ ಅಧ್ಯಯನ ವಿಷಯಗಳ ಜನವರಿ 2ನೇ ವಾರದಿಂದ ಫೆಬ್ರವರಿ ಮೊದಲನೇ ವಾರದವರೆಗಿನ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು ಪ್ರತಿ ಚಟುವಟಿಕೆಗಳನ್ನು ಸುಗಮಕಾರರಿಗೆ ಸಾಮಗ್ರಿಗಳ ಮೂಲಕ ಅಭ್ಯಾಸ ಪುಸ್ತಕಗಳ ಮೂಲಕ ಪರಿಚಯಿಸಲಾಯಿತು ರೂಪಣಾತ್ಮಕ ಮೌಲ್ಯಮಾಪನ 4 ರ ಕುರಿತು ಚರ್ಚಿಸಲಾಯಿತು
ಇಂದಿನ ಸಮಾಲೋಚನೆ ಸಭೆಯಲ್ಲಿ CRP ಗಳಾದ ಶ್ರೀ ದೇವೇಂದ್ರಪ್ಪ ಯಾದವ್ ಶ್ರೀ ವೀರಣ್ಣಗೌಡ ಪಾಟೀಲ ಶ್ರೀ ಸಾಯಿಬಣ್ಣ ಪೂಜಾರಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಚಿಂಚೋಳಿ ಮತ್ತು ಸೇಡಂನ ಮುಖ್ಯಸ್ಥರಾದ ಶ್ರೀ ಗಂಗಾಧರ ಸ್ವಾಮಿ ಉಪಸ್ಥಿತರಿದ್ದರು.
ಇಂದಿನ ಸಮಾಲೋಚನಾ ಸಭೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಬಸವರಾಜ್ ಸಾಗರ್ ರವರು ಆಗಮಿಸಿ ಸಮಾಲೋಚನೆ ಸಭೆ ಕುರಿತು ಹಾಗೂ ಸೇಡಂ ತಾಲೂಕಿನ ಶೈಕ್ಷಣಿಕ ಪ್ರಗತಿಯ ಕುರಿತು ಮಾತನಾಡಿದರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲಾ ಮೇಡಂ ಕರಿಗೂಳಿ ದುಗನೂರ 4 ಕ್ಲಸ್ಟರಗಳ ನಲಿಕಲಿ ಸುಗಮಕಾರರು ಭಾಗವಹಿಸಿದ್ದರು ಎಲ್ಲರ ಸಹಕಾರದಿಂದ ಸಮಾಲೋಚನೆ ಸಭೆ ಯಶಸ್ವಿಯಾಗಿ ನಡೆಯಿತು.






















































No comments:
Post a Comment