Thursday, January 4, 2024

ನಲಿಕಲಿ ಹೆಜ್ಜೆ ಗುರುತು ಕಾರ್ಯಗಾರ TLC ಮುಧೋಳ.


































 ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸೇಡಂ ಹಾಗೂ 
ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ಇಂದು TLC ಮುಧೋಳದಲ್ಲಿ ಮುಧೋಳ ವಲಯದ ಆಯ್ದ ನಲಿಕಲಿ ಸುಗಮಕಾರರಿಗಾಗಿ ನಲಿಕಲಿ ಹೆಜ್ಜೆ ಗುರುತು ಕಾರ್ಯಗಾರದ ಎರಡನೆಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೊದಲಿಗೆ ಈ ಕಾರ್ಯಕ್ರಮದ ಅನುಷ್ಠಾನದ ಕುರಿತು ಹಿಮ್ಮಾಯಿತಿ ಪಡೆಯಲಾಯಿತು.
ಕಿರಣ್ ಸರ್ ರವರು ಕಾರ್ಯಗಾರದ ವಿಷಯಗಳನ್ನು ಹಂಚಿಕೊಂಡರು. 
ನಂತರದಲ್ಲಿ ಶರಣಕುಮಾರ ಸರ್ ರವರು ಸ್ಥಾನಬೆಲೆಯ ಪರಿಕಲ್ಪನೆ ಕುರಿತು ಮಕ್ಕಳನ್ನು ಬಳಸಿಕೊಂಡು ತರಗತಿ ನಿರ್ವಹಣೆ ಮಾಡಿದರು
ನಂತರದಲ್ಲಿ ಸ್ಥಾನಬೆಲೆಯ ಪರಿಕಲ್ಪನೆಯಿಂದ ಶಿಕ್ಷಕರಿಗೆ ಆದಂತಹ ಉಪಯೋಗಗಳ ಕುರಿತು ಪ್ರತಿ ಸುಗಮಕಾರರಿಂದ ಮಾಹಿತಿಯನ್ನು ಪಡೆದು ಕಿರಣ್ ಸರ್ ಪಟ್ಟಿ ಮಾಡಿದರು.
ಮಧ್ಯಾಹ್ನದ ಅವಧಿಯಲ್ಲಿ ಎಲ್ಲಾ ಸುಗಮಕಾರರಿಗೆ ಸಾಮಗ್ರಿಗಳನ್ನು ನೀಡಿ arrow cards ತಯಾರಿಸಲು ಮಾರ್ಗದರ್ಶನ ಮಾಡಿದರು. ಎಲ್ಲಾ ಸುಗಮಕಾರರು ಉತ್ಸಾಹದಿಂದ arrow cards ಸಿದ್ದಪಡಿಸಿಕೊಂಡರು.
ಇಂದಿನ ಕಾರ್ಯಾಗಾರದಲ್ಲಿ CRP ಶ್ರೀ ವೀರನಗೌಡ ರವರು ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಕಿರಣ್ ಸರ್ ಶರಣಕುಮಾರ ಸಲಗರೆ ರವರು 25 ಜನ ನಲಿಕಲಿ ಸುಗಮಕಾರರು ಭಾಗವಹಿಸಿದ್ದರು ಇಂದಿನ ಕಾರ್ಯಗಾರ ತುಂಬಾ ಉಪಯುಕ್ತವಾಗಿತ್ತು.

No comments:

Post a Comment