ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೇಡಂ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸೇಡಂ ಇವರ ಸಹಯೋಗದಲ್ಲಿ ಮುಧೋಳ, ಮದನಾ ಲಿಂಗಮಪಲ್ಲಿ ರಿಬ್ಬನಪಲ್ಲಿ ಕ್ಲಸ್ಟರ್ ಗಳ ನಲಿಕಲಿ ತರಗತಿ ನಿರ್ವಹಣೆ ಮಾಡುವ ಶಿಕ್ಷಕ/ ಶಿಕ್ಷಕಿಯರಿಗೆ 2ನೆ ನಲಿಕಲಿ ಸಮಾಲೋಚನೆ ಸಭೆಯನ್ನು ಎರಡು ತಂಡಗಳಲ್ಲಿ TLC ಮುಧೋಳದಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 2:30 ರ ವರೆಗೆ ನಡೆಸಲಾಯಿತು.
ಇಂದಿನ ಸಮಾಲೋಚನೆ ಸಭೆಯಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀಯುತ ಶಂಕರಲಿಂಗಪ್ಪ ಸರ್ ರವರು ಭಾಗವಹಿಸಿ ಮಾರ್ಗದರ್ಶನ ಮಾಡಿದರು ಲಿಂಗಂಪಲ್ಲಿ ಕ್ಲಸ್ಟರ್ ನ CRP ಯಾವರಾದ ಶ್ರೀ ದೇವೇಂದ್ರಪ್ಪ ಯಾದವ್, ಮದನಾ,ಕ್ಲಸ್ಟರ್ ನ CRP ಯಾವರಾದ ಶ್ರೀ ವೀರಣ್ಣಗೌಡ, ಮುಧೋಳ ಕ್ಲಸ್ಟರ್ ನ CRP ಯಾವರಾದ ಶ್ರೀ ಶರಣಪ್ಪ ಪರಮಾ, ರಿಬ್ಬನಪಲ್ಲಿ ಕ್ಲಸ್ಟರ್ ನ CRP ಯಾವರಾದ ಶ್ರೀ ಸಾಯಬಣ್ಣ ಪೂಜಾರಿ ಅಜೀಮ್ ಪ್ರೇಮಜಿ ಫೌಂಡೇಶನ್ ಸಂಯೋಜಕರಾದ ಶ್ರೀ ಶರಣು ಸಲಗರೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲಾ, ಶ್ರೀಮತಿ ರತ್ನಬಾಯಿ, ಶ್ರೀಮತಿ ಅರ್ಚನಾ, ಹಾಗೂ ಕರಿಗೂಳಿ ದುಗನೂರ ಉಪಸ್ಥಿತರಿದ್ದರು ಇಂದಿನ ಸಮಾಲೋಚನೆ ಸಭೆಯಲ್ಲಿ ಆಗಸ್ಟ್ 2ನೇ ವಾರದಿಂದ ಸೆಪ್ಟೆಂಬರ್ 2ನೇ ವಾರದ ವರೆಗಿನ ಭಾಷೆ, ಗಣಿತ, ENK, ಪರಿಸರ ಅಧ್ಯಯನ ಚಟುವಟಿಕೆಗಳ ಪರಿಚಯ ಮಾಡಲಾಯಿತು ಕನ್ನಡ,ಗಣಿತ,ENK ಪ್ರಾಯೋಗಿಕ ಪಾಠ ಮಾಡಲಾಯಿತು.ಕೊನೆಗೆ ದಾಖಲೆಗಳ ನಿರ್ವಹಣೆ ಕುರಿತು ಚರ್ಚಿಸಲಾಯಿತು ಇಂದಿನ ಸಮಾಲೋಚನೆ ಸಭೆಯಲ್ಲಿ ಶಿಕ್ಷಕ/ ಶಿಕ್ಷಕಿಯರ ಭಾಗವಹಿಸುವಿಕೆ ಉತ್ತಮವಾಗಿತ್ತು.





































No comments:
Post a Comment