ಇಂದು ಮುಧೋಳ್ TLC ಯಲ್ಲಿ
ಮುಧೋಳ,ರಿಬ್ಬನಪಲ್ಲಿ, ಲಿಂಗಂಪಲ್ಲಿ,ಮದನಾ, ಕ್ಲಸ್ಟರ್ಗಳ ನಲಿ ಕಲಿ ಸುಗಮಕಾರರಿಗೆ ಒಂದು ದಿನದ ಪುನಶ್ಚೇತನ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು ಸದರಿ ಕಾರ್ಯಗಾರದಲ್ಲಿ ನಲಿ ಕಲಿ ನೋಡಲ ಅಧಿಕಾರಿಗಳಾದ
ಶ್ರೀ ಧರ್ಮಪಾಲ್ ಸರ್ ರವರು ಕಾರ್ಯಗಾರದ ಉದ್ದೇಶವನ್ನು ಕುರಿತು ಮಾಹಿತಿಯನ್ನು ಹಂಚಿಕೊಂಡರು. ಮದನಾ ಸಿ ಆರ್ ಪಿ ಯವರಾದ ವೀರಣ್ಣಗೌಡ ಲಿಂಗಂಪಲ್ಲಿ ಸಿ ಆರ್ ಪಿ ಯವರಾದ ದೇವೇಂದ್ರಪ್ಪ ಯಾದವ್ ಮುಧೋಳ್ ಸಿ ಆರ್ ಪಿ ಯವರಾದ ಶರಣು ಪರ್ಮಾ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಶ್ರೀ ಶರಣ ಕುಮಾರ್ ಉಪಸ್ಥಿತರಿದ್ದರು 4 ಕ್ಲಸ್ಟರ್ ಗಳ ನಲಿ ಕಲಿ ಸುಗಮಕಾರರು ಭಾಗವಹಿಸಿದ್ದರು.
ಮೊದಲನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲ ಮೇಡಂ ರವರು ವಿದ್ಯಾ ಪ್ರವೇಶ ಅರ್ಥ ಮತ್ತು ಮಹತ್ವ ವಿದ್ಯಾ ಪ್ರವೇಶದಲ್ಲಿ ಆಗಿರುವ ಬದಲಾವಣೆಗಳು ವಿದ್ಯಾ ಪ್ರವೇಶ ನಿರ್ವಹಣೆ, ಮೌಲ್ಯಮಾಪನ ನಮೂನೆಗಳು ದಿನಚರಿ ಕುರಿತು ವಿಷಯ ಮಂಡನೆ ಮಾಡಿದರು.
ಎರಡನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ್ ರವರು ಕಳೆದ ವರ್ಷ ಸರಬರಾಜು ಆಗಿರುವ ವಿದ್ಯಾ ಪ್ರವೇಶ ಶಿಕ್ಷಕರ ಕೈಪಿಡಿಯಲ್ಲಿ ಈ ವರ್ಷ ನಿರ್ವಹಿಸಬೇಕಾಗಿರುವ 40 ದಿನಗಳ ಚಟುವಟಿಕೆಗಳನ್ನು ಗುರುತು ಮಾಡಿಸಿದರು.2 ಮತ್ತು 3 ನೇ ತರಗತಿಗಳ ಸೇತು ಬಂದ ಕಾರ್ಯಕ್ರಮದ ಕುರಿತು ಹಾಗೂ ವಿದ್ಯಾ ಪ್ರವೇಶ ಮತ್ತು ಸೇತು ಬಂದ ಕಾರ್ಯಕ್ರಮ ನಿರ್ವಹಣೆ ಕುರಿತು ಹಾಗೂ 2023/24ರಲ್ಲಿ ನಲಿ ಕಲಿಯಲ್ಲಿ ಆಗಿರುವ ಬದಲಾವಣೆಗಳ ಕುರಿತು ವಿಷಯ ಮಂಡನೆ ಮಾಡಿದರು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಶರಣ್ ಕುಮಾರ್ ಸರ್ ಅವರು ನಲಿ ಕಲಿ ಮಹೆವಾರು ಹಂಚಿಕೆಯನ್ನು ವಿವರಿಸಿದರೂ.
ಮಧ್ಯಾಹ್ನದ ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶಿವಕುಮಾರ್ ಪಾಟೀಲ್ ಸರ್ ರವರು 45 ದಿನಗಳ ಇಂಗ್ಲಿಷ್ ವಿಷಯದ ಸೇತುಬಂಧ ಕಾರ್ಯಕ್ರಮದ ಬಗ್ಗೆ ಎರಡನೇ ತರಗತಿಯ ಮಕ್ಕಳಿಗೆ ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸೇತುಬಂಧದಲ್ಲಿ ಕಲಿಸಬೇಕಾದ ಚಟುವಟಿಕೆಗಳ ಕುರಿತು ವಿಷಯವನ್ನು ಮಂಡಿಸಿದರು.
ಕೊನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಕರಿಗೂಳಿ ದುಗನೂರ್ ರವರು ನಲಿ-ಕಲಿಯಲ್ಲಿ ಮೌಲ್ಯಮಾಪನ ಮತ್ತು ದಾಖಲೆಗಳ ನಿರ್ವಹಣೆ
1.ಪ್ರಗತಿ ನೋಟ.
2.ಶಿಕ್ಷಕರ ದಿನಚರಿ
3.ವೈಯಕ್ತಿಕ ವಹಿ.
4. ಕ್ರೂಡಿ ಕೃತವಹಿ
5.ಕೃತಿ ಸಂಪುಟ
ಕುರಿತು ವಿಷಯ ಮಂಡನೆ ಮಾಡಿದರು.
4:30ಕ್ಕೆ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಶಂಕರಲಿಂಗಪ್ಪ ಸರ್ ಕಾರ್ಯಗಾರಕ್ಕೆ ಭೇಟಿ ನೀಡಿ ಬೆಳಗ್ಗೆಯಿಂದ ಕೊನೆಯವರೆಗೆ ಆಗಿರುವ ಅವಧಿಗಳ ವಿವರವನ್ನು ಸುಗಮಕಾರರಿಂದ ಪಡೆದುಕೊಂಡರು ಎಲ್ಲಾ ಸುಗಮಕಾರರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು.
ಇಂದಿನ ಕಾರ್ಯಗಾರದಲ್ಲಿ ನಡೆದಿರುವ ಎಲ್ಲಾ ಅವಧಿಗಳಲ್ಲಿ ಸುಗಮಕಾರರ ಭಾಗವಹಿಸುವಿಕೆ ಮತ್ತು ಚರ್ಚೆ ಉತ್ತಮವಾಗಿ ಮೂಡಿಬಂದಿತು ಹಲವಾರು ಸುಗಮಕಾರರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಲಾಯಿತು ಒಟ್ಟಾರೆಯಾಗಿ ಇಂದಿನ ಕಾರ್ಯಗಾರ ಎಲ್ಲರ ಸಹಕಾರದಿಂದ ಉತ್ತಮವಾಗಿ ಮೂಡಿ ಬಂದಿತು.
ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಪ್ರತಿ ಸುಗಮಕಾರರಿಗೂ ಕೂಡ 40 ದಿನಗಳ ವಿದ್ಯಾ ಪ್ರವೇಶ ಕಾರ್ಯಕ್ರಮದ ಚಟುವಟಿಕೆಗಳ ವಿವರ ಒಂದನೇ ತರಗತಿ ಎರಡನೇ ತರಗತಿ ಮೂರನೇ ತರಗತಿಗಳ ವಿಷಯವಾರು ಕಲಿಕಾ ಏಣಿಗಳನ್ನು ವಿತರಿಸಲಾಯಿತು.



























No comments:
Post a Comment