Tuesday, June 6, 2023

ನಲಿಕಲಿ ಪುನಶ್ಚೇತನ ಕಾರ್ಯಗಾರ TLC ಮುಧೋಳ 6-6-2023




























ಇಂದು ಮುಧೋಳ್ TLC ಯಲ್ಲಿ ಕಾನಗಡ್ದಾ ಮೋತಕಪಲ್ಲಿ ದುಗನೂರ್ ಕೋಲಕುಂದ ಕ್ಲಸ್ಟರ್ ಗಳ ನಲಿಕಲಿ  ಸುಗಮಕಾರರಿಗೆ ನಲಿಕಲಿ ಪುನಶ್ಚೇತನ ಕಾರ್ಯಗಾರವನು ಹಮ್ಮಿಕೊಳ್ಳಲಾಗಿತ್ತು ಮೊದಲಿಗೆ ಎಲ್ಲಾ ಸುಗಮಕಾರರಿಂದ ತಮ್ಮ ತಮ್ಮ ನಲಿ-ಕಲಿ ಘಟಕಗಳಲ್ಲಿ ಜೂನ್ ಒಂದರಿಂದ ನಡೆದಿರುವ ಚಟುವಟಿಕೆಗಳ ಕುರಿತು ಹಿಮಾಹಿತಿಯನ್ನು ಪಡೆಯಲಾಯಿತು. 

ಬೆಳಿಗ್ಗೆ 10:30ಕ್ಕೆ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶ್ರೀ ಶಂಕರಲಿಂಗಪ್ಪ ಸರ್ ರವರು ಆಗಮಿಸಿ, ಎಲ್ಲಾ ಸುಗಮಕಾರರಿಗೂ ಮಾರ್ಗದರ್ಶನ ಮಾಡಿದರು. ಬಿ ಆರ್ ಪಿ ಶ್ರೀ ಧರ್ಮಪಾಲ್ ಸರ್ ಸಿ ಆರ್ ಪಿ ಗಳಾದ ಶ್ರೀ ವೀರನಗೌಡ ಶ್ರೀ ಶರಣಬಸಪ್ಪ ಮೆದಕ್ ಶ್ರೀ ಶರಣು ಪರಮಾ ಶ್ರೀ ಕಾಶಿನಾಥ್ ಹಡಗಿಲ್ ಉಪಸ್ಥಿತರಿದ್ದರು.

ಮೊದಲನೇ ಅವಧಿಯಲ್ಲಿ ವಿದ್ಯಾ ಪ್ರವೇಶ ಕಾರ್ಯಕ್ರಮದ ಅರ್ಥ ಮತ್ತು ಮಹತ್ವ 2023/ 24 ನೇ ಸಾಲಿನಲ್ಲಿ ವಿದ್ಯಾ ಪ್ರವೇಶದಲ್ಲಿ ಆಗಿರುವ ಬದಲಾವಣೆಗಳು ವಿದ್ಯಾ ಪ್ರವೇಶ ಕಾರ್ಯಕ್ರಮದ ಅನುಷ್ಠಾನ ಕಳೆದ ಸಾಲಿನಲ್ಲಿ ಸರಬರಾಜು ಮಾಡಲಾಗಿರುವ ಶಿಕ್ಷಕರ ವಿದ್ಯಾ ಪ್ರವೇಶ ಕೈಪಿಡಿಯಲ್ಲಿ ಈ ವರ್ಷ ನಿರ್ವಹಿಸಬೇಕಾಗಿರುವ ಚಟುವಟಿಕೆಗಳನ್ನು ಗುರುತಿಸಲಾಯಿತು ಹಾಗೂ ಪ್ರವೇಶ ದಾಖಲೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡನೆ ಮಾಡಿದರು.

ಎರಡನೆಯ ಅವಧಿಯಲ್ಲಿ 2ಮತ್ತು3 ಸೇತುಬಂಧ ಕಾರ್ಯಕ್ರಮದ ಕುರಿತು ವಿಷಯ ಮಂಡನೆ ಮಾಡಿದರು ಒಂದೇ ತರಗತಿಯಲ್ಲಿ ವಿದ್ಯಾ ಪ್ರವೇಶ ಮತ್ತು ಸೇತು ಬಂದ ಕಾರ್ಯಕ್ರಮದ ನಿರ್ವಹಣೆ ಕುರಿತು ಉಪಯುಕ್ತವಾದ ಸಲಹೆಗಳ ಬಗ್ಗೆ ಚರ್ಚಿಸಲಾಯಿತು. ನಂತರ ನಲಿ-ಕಲಿಯಲ್ಲಿ ಆಗಿರುವ ಪರಿಷ್ಕರಣೆ ಮಾಹೆವಾರು ಹಂಚಿಕೆ ಕುರಿತು ಚರ್ಚಿಸಲಾಯಿತು.

ಮೂರನೆಯ ಅವಧಿಯಲ್ಲಿ ಕಲಿಕಾ ಏಣಿ ಪರಿಚಯದ ಜೊತೆಗೆ ಕಲಿಕಾ ಏಣಿಗೆ ಅನುಗುಣವಾಗಿ ಕಾರ್ಡುಗಳನ್ನು ಜೋಡಿಸುವ ಕುರಿತು ಸುಗಮಕಾರರಿಗೆ ತಿಳಿಸಲಾಯಿತು ಮೂರು ತರಗತಿಗಳ ಅಭ್ಯಾಸ ಪುಸ್ತಕಗಳ ಪರಿಚಯ ಮಾಡಿಸಲಾಯಿತು.

ಊಟದ ಅವಧಿಯ ನಂತರ ENK 45 ದಿನಗಳ ಸೇತುಬಂಧ ಕಾರ್ಯಕ್ರಮದ ಕುರಿತು ಸಂಪನ್ಮೂಲ ವ್ಯಕ್ತಿಗಳು ಸುಗಮಕಾರರಿಗೆ ಇಂಗ್ಲಿಷ್ ಅಕ್ಷರಗಳ ಮಿಂಚಿಪಟ್ಟಿಗಳನ್ನು ಪ್ರತಿಯೊಬ್ಬ ಸುಗಮಕಾರರಿಗೆ ನೀಡಿ ಅಕ್ಷರದ ಪರಿಚಯ ಮತ್ತು ಅದರ ಸೌಂಡ್ಸ್ ಕುರಿತು ಸುಗಮಕಾರರಿಂದ ಚಟುವಟಿಕೆ ಮಾಡಿಸಿದರು ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸೇತುಬಂಧದಲ್ಲಿ ನಿರ್ವಹಿಸಬೇಕಾಗಿರುವ ಚಟುವಟಿಕೆಗಳ ಕುರಿತು ವಿವರಿಸಿದರು.

ಕೊನೆಯ ಅವಧಿಯಲ್ಲಿ ಮೌಲ್ಯಮಾಪನ ಮತ್ತು ದಾಖಲೆಗಳ ನಿರ್ವಹಣೆ ಕುರಿತು ಸುಗಮಕಾರರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತ  ನಲಿ-ಕಲಿಯಲ್ಲಿ ನಿರ್ವಹಿಸಬೇಕಾಗಿರುವ ದಾಖಲೆಗಳ ಕುರಿತು ಚರ್ಚಿಸಲಾಯಿತು.

ಎಲ್ಲಾ ಸುಗಮಕಾರರಿಗೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ವತಿಯಿಂದ 40 ದಿನಗಳ ವಿದ್ಯಾ ಪ್ರವೇಶ ಚಟುವಟಿಕೆಗಳ ಪಟ್ಟಿ ಮೂರು ತರಗತಿಗಳ ಕನ್ನಡ ಗಣಿತ ಪರಿಸರ ಅಧ್ಯಯನದ ಕಲಿಕಾ ಏಣಿಗಳ ಜೆರಾಕ್ಸ್ ಪ್ರತಿ ಗಳನ್ನು ವಿತರಿಸಲಾಯಿತು.

ಅಜೀಂ ಪ್ರೇಮ್ ಜಿ ಫೌಂಡೇಶನ್ ನ ಶ್ರೀ ಶರಣ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲ ಶ್ರೀ ಶಿವಕುಮಾರ ಪಾಟೀಲ್ ಶ್ರೀ ಕರಿಗೂಳಿ ದುಗನೂರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.



 

No comments:

Post a Comment