ಶಾಲಾ ಶಿಕ್ಷಣ ಇಲಾಖೆ ಸೇಡಂ ಮತ್ತು
ಅಜೀಂ ಪ್ರೇಮ್ ಜೀ ಫೌಂಡೇಶನ್ ಸೇಡಂ ರವರ ಸಹಯೋಗದಲ್ಲಿ ಇಂದು ಮುಧೋಳ TLC ಕೇಂದ್ರದಲ್ಲಿ ಲಿಂಗಂಪಲ್ಲಿ ರಿಬ್ಬನಪಲ್ಲಿ ಮುಧೋಳ ಮದನಾ ಕ್ಲಸ್ಟರ್ಗಳ ನಲಿಕಲಿ ಸುಗಮಕಾರರಿಗಾಗಿ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಮೊದಲನೆಯ ಅವಧಿಯಲ್ಲಿ ಗಣಿತ ವಿಷಯದ ಮಾಹೆವಾರು ಹಂಚಿಕೆಯಲ್ಲಿ ಜನವರಿ ತಿಂಗಳಿನ ಚಟುವಟಿಕೆಗಳನ್ನು ಪರಿಚಯಿಸಿ ಭಿನ್ನರಾಶಿ ಪರಿಕಲ್ಪನೆ ಮಕ್ಕಳನ್ನು ಬಳಸಿಕೊಂಡು ಸಾಮಗ್ರಿಗಳನ್ನು ಬಳಸಿಕೊಂಡು ಪ್ರಾಯೋಗಿಕ ಪಾಠ ಮಾಡಲಾಯಿತು.
ಎರಡನೆಯ ಅವಧಿಯಲ್ಲಿ ಭಾಷೆ ವಿಷಯದ ಮಾಹೆವಾರು ಹಂಚಿಕೆ ಹಾಗೂ ಕಲಿಕಾ ಏಣಿ ಪರಿಚಯದೊಂದಿಗೆ ಜೇನುಗೂಡು ಪಾಠವನ್ನು ಮಾಡಲಾಯಿತು.
ಮೂರನೆಯ ಅವಧಿಯಲ್ಲಿ ಇಂಗ್ಲಿಷ್ ಮಾಹೆವಾರು ಹಂಚಿಕೆ ಜನವರಿ ತಿಂಗಳ ಲೆವೆಲ್ 1,2,3, ಚಟುವಟಿಕೆಗಳ ಪರಿಚಯ ಮಾಡಲಾಯಿತು ಮತ್ತು ಪರಿಸರ ಅಧ್ಯಯನದ ಮಾಹೆವಾರು ಹಂಚಿಕೆ ಮತ್ತು ಕಲಿಕಾ ಏಣಿ ಪರಿಚಯಿಸುವುದರ ಜೊತೆಗೆ ಆಟಗಳ ಕುರಿತು ವಿವಿಧ ಚಟುವಟಿಕೆಗಳ ಮೂಲಕ ವಿಷಯವನ್ನು ಹಂಚಿಕೊಳ್ಳಲಾಯಿತು
ಕೊನೆಯ ಅವಧಿಯಲ್ಲಿ ದಾಖಲೆಗಳ ನಿರ್ವಹಣೆ ರೂಪಣಾತ್ಮಕ ಮೌಲ್ಯಮಾಪನ 3ರ ಕುರಿತು ಚರ್ಚಿಸಲಾಯಿತು ಇಂದಿನ ಸಮಾಲೋಚನಾ ಸಭಯಲ್ಲಿ ಸುಗಮಕಾರರ ಭಾಗವಹಿಸುವಿಕೆ ಉತ್ತಮವಾಗಿತ್ತು ಇಂದಿನ ಸಮಾಲೋಚನೆ ಸಭೆಗೆ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಶಂಕರಲಿಂಗಪ್ಪ ಸರ್ ರವರು ಭೇಟಿ ನೀಡಿ ಮಾರ್ಗದರ್ಶನ ಮಾಡಿದರು 4 ಕ್ಲಸ್ಟರ್ ಗಳ ಸಿ ಆರ್ ಪಿ ಗಳಾದ ಶ್ರೀ ದೇವೇಂದ್ರಪ್ಪ ಯಾದವ್, ಶ್ರೀ ವೀರನಗೌಡ ಪಾಟಿಲ್, ಶರಣು ಪರಮಾ ,ಶ್ರೀ ಸಾಯಬಣ್ಣ ಪೂಜಾರಿ ರವರು ಅಜೀಂ ಪ್ರೇಮ್ ಜಿ ಫೌಂಡೇಶನ ಶರಣ ಕುಮಾರ್ ಸಲಗರೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ನಿರ್ಮಲ, ಕುಮಾರಿ ಶಕುಂತಲಾ ಕರಿಗೂಳಿ ದುಗನೂರ ಹಾಗೂ 4 ಕ್ಲಸ್ಟರ್ ಗಳಿಂದ 45 ಜನ ಸುಗಮಕಾರರು ಭಾಗವಹಿಸಿದ್ದರು.













































No comments:
Post a Comment